ಬಾಬಾಸಾಹೇಬರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ನಡೆಯಬೇಕು ಶ್ರೀಮತಿ ಬಿ.ವಿ.ಅಶ್ವಿಜ

ತುಮಕೂರು : ಮಹಾನಗರ ಪಾಲಿಕೆ ಆವರಣದಲ್ಲಿ ಬಾಬಾ ಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್‌ ರವರ ಪುಣ್ಯಸ್ಮರಣೆಯ 68 ನೇ ಮಹಾಪರಿನಿಬ್ಬಾಣ ಭೀಮ ಸಂಕಲ್ಪ ದಿವಸ್ ಆಚರಣೆಯನ್ನು ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿಯ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ವತಿಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ಬಿ.ವಿ.ಅಶ್ವಿಜರವರು ಮಾತನಾಡಿ ಬಾಬಾ ಸಾಹೇಬರು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಯಲ್ಲ, ಅವರು ಭಾರತದ ಪ್ರತಿಯೊಬ್ಬ ಪ್ರಜೆಗಳಿಗೂ ಸಮಾನತೆಯ ಪಾಠವನ್ನು ಹೇಳಿದಂತ ಮಹಾನ್ ಚೇತನರು, ನಾವು ಇಂದು ಭಾರತ ದೇಶದಲ್ಲಿ ನಿಶ್ಚಿಂತೆಯಿಂದ ಉಸಿರಾಡುತ್ತಿದ್ದೇವೆಂದರೆ ಅದಕ್ಕೆ ಬಾಬಾ ಸಾಹೇಬರ ಕೊಡುಗೆ ಅಪಾರವಾದದ್ದು ಅವರು ಹಾಕಿಕೊಟ್ಟಿರುವ ಸಂವಿಧಾನ ಪ್ರತಿಯೊಬ್ಬ ಭಾರತದ ಪ್ರಜೆಗೂ ಸೀಮಿತವಾಗಿರುವಂತಹದ್ದು, ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳು ನಮ್ಮ ಸಂವಿಧಾನವೇ ಶ್ರೇಷ್ಠವಾದದ್ದು ಎಂದು ಹೇಳಿವೆಯಲ್ಲದೇ ಎಷ್ಟೋ ದೇಶಗಳು ನಮ್ಮ ಸಂವಿಧಾನವನ್ನು ಆಧಾರವನ್ನಾಗಿಟ್ಟುಕೊಂಡು ಅವರು ಆಡಳಿತವನ್ನು ಮಾಡುತ್ತಿದ್ದಾರೆ, ಸಂವಿಧಾನ ಅನುಸರಿಸದ ಕೆಲವು ದೇಶಗಳು ಇಂದಿಗೂ ಸಹ ಮಿಲಿಟರಿ ಆಡಳಿತ, ಸರ್ವಾಧಿಕಾರಿಗಳ ಆಡಳಿತದಿಂದ ಅಧಿಕಾರವನ್ನು ನಡೆಸುತ್ತಿವೆ, ಅಲ್ಲಿನ ಜನರು ಪಡುತ್ತಿರುವ ಕಷ್ಟಗಳು ನಾವು ಪ್ರಸ್ತುತ ದಿನಗಳಲ್ಲಿ ಕಣ್ಣಾರೆ ಕಾಣುತ್ತಿದ್ದೇವೆ ಎಂದರು ಹಾಗಾಗಿ ಸ್ವಂತ ಬಲಿಷ್ಠ ಪ್ರಜಾಪ್ರಭುತ್ವವನ್ನು ಹೊಂದಿರುವ ಏಕೈಕ ದೇಶವೆಂದರೆ ನಮ್ಮ ಭಾರತ ದೇಶ ಎಂದು ತಿಳಿಸಿದರು, ಜೊತೆಗೆ ಬಾಬಾಸಾಹೇಬರು ಹಾಕಿಕೊಟ್ಟು ಹೋಗಿರುವ ಮಾರ್ಗದರ್ಶನದಲ್ಲಿ ನಾವು ನಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಪ್ರಪಂಚದ ಪ್ರತಿಭಾನ್ವಿತ ವ್ಯಕ್ತಿಯಾಗಿ ಅಪಾರವಾದ ಜ್ಞಾನ ಮತ್ತು ಚಾರಿತ್ರ್ಯ, ಶಿಸ್ತು, ಸಮಯ ಪಾಲನೆ, ಸಂಯಮ, ಸನ್ನಡತೆ, ತ್ಯಾಗ, ಪರಿಶ್ರಮದ ಮುಖಾಂತರ ಜಗತ್ತೇ ಮೆಚ್ಚಿ, ಗೌರವಿಸುವಂತಹ ಶಕ್ತಿಯಾದವರು ಭಾರತ ಭಾಗ್ಯವಿದಾತ ಮತ್ತು ವಿಶ್ವ ಮಹಾನ್ ನಾಯಕ ಡಾ. ಬಾಬಾ ಸಾಹೇಬ್ ಬೀಮರಾವ್ ಅಂಬೇಡ್ಕರ್ ಮಹಾರಾಷ್ಟçದ ಮಹೌನ್‌ನಲ್ಲಿ ೧೮೯೧ ಏಪ್ರಿಲ್ ೧೪ರಂದು ಜನಿಸಿದ ಮಹಾನ್ ಚೇತನ ತಮ್ಮ ಬಾಲ್ಯ, ಯೌವನ ಮತ್ತು ಯೌವನದ ನಂತರದ ದಿನಗಳಲ್ಲಿ ಭಾರತ ದೇಶದ ಸಮಗ್ರ ಅಭಿವೃದ್ಧಿಗೆ, ರಾಷ್ಟ್ರೀಯತೆಗೆ, ಶೋಷಿತ ವರ್ಗ, ಮಹಿಳೆಯರು, ಕಾರ್ಮಿಕರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಸೇರಿದಂತೆ ಭಾರತದ ಪ್ರತಿಯೊಬ್ಬ ಪ್ರಜೆಯ ಸಮಾನತೆಗಾಗಿ ಹಗಲಿರುಳು ದುಡಿದ ವ್ಯಕ್ತಿಯಾದವರು ಅಂಬೇಡ್ಕರ್ ಡಿಸೆಂಬರ್ ೬, ೧೯೫೬ರಲ್ಲಿ ಇಹಲೋಕಕ್ಕೆ ಪ್ರಯಾಣ ಬೆಳಿಸಿದರು ಅಂತಹ ಮಹಾನ್ ಚೇತನರ ಪುಣ್ಯಸ್ಮರಣೆಯ ದಿನವಾದ ಇಂದು ಪರಿನಿಬ್ಬಾಣ ದಿವಸ್ ಬೀಮ ಸಂಕಲ್ಪ ದಿನವೆಂದು ಆಚರಿಸಲಾಗುತ್ತಿದೆ ಬಾಬಾ ಸಾಹೇಬರು ತಮ್ಮ ಜೀವನದುದ್ದಕ್ಕೂ ಸಮಾಜದ ಏಳ್ಗೆ, ಸಮಾಜದ ಏಕತೆ, ಸಮಾನತೆ ಸೇರಿದಂತೆ, ದೀನ ದಲಿತರ ಉದ್ಧಾರಕ್ಕಾಗಿ ಮಾತ್ರ ಜೀವಿಸಿದಂತಹ ವ್ಯಕ್ತಿ, ತಮ್ಮ ಸ್ವಂತಕ್ಕಾಗಿ ಏನೂ ಮಾಡಿಕೊಳ್ಳದೇ ತಮ್ಮ ಜೀವನ ಪ್ರತಿಯೊಂದು ಕ್ಷಣವನ್ನೂ ಸಮಾಜದ ಒಳತಿಗಾಗಿ ಮೀಸಲಿಟ್ಟಂತಹ ವ್ಯಕ್ತಿ, ಅಂತಹ ವ್ಯಕ್ತಿಗಳು ಭಾರತದ ಪ್ರಜೆಗಳ ಪ್ರಾತಃಸ್ಮರಣಿಯರು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಇಂದ್ರಕುಮಾರ್, ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮಿನಾರಾಯಣ್ ಎಸ್, ದರ್ಶನ್, ಹನುಮಂತರಾಯಪ್ಪ, ಶ್ರೀನಿವಾಸ್ (ದಿಬ್ಬೂರು), ಗೋವಿಂದರಾಜು ಕೆ, ಗುರುಪ್ರಸಾದ್, ರಂಗಸ್ವಾಮಯ್ಯ, ಟೈಲರ್ ಜಗದೀಶ್, ರಂಜನ್, ಶಿವಣ್ಣ, ಸುರೇಶ್, ರಾಕೇಶ್, ಶಬ್ಬೀರ್ ಅಹಮ್ಮದ್, ರಾಮಚಂದ್ರರಾವ್ ಎಸ್, ಇಮ್ರಾನ್, ಆಟೋ ಕುಮಾರ್, ಗೋವಿಂದರಾಜ್, ನರಸಿಂಹಮೂರ್ತಿ, ರಫೀಕ್ ಅಹಮ್ಮದ್, ಶ್ರೀನಿವಾಸ್ ಎನ್.ವಿ, ಹನುಮನರಸಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *