ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಅಲ್ಲಿಗೆ ಹೋಗಿರದಿದ್ದರೆ ಇನ್ನು 25 ವರ್ಷ ಕಳೆದರೂ ಈ ಭಾಗಕ್ಕೆ ಎತ್ತಿನಹೊಳೆ ನೀರು ಹರಿಯುತ್ತಿರಲಿಲ್ಲ ಸಹಕಾರ ಸಚಿವ ಕೆ.ಎನ್. ರಾಜಣ್ಣ 

*ಮಧುಗಿರಿ ನ್ಯೂಸ್*

ಮಧುಗಿರಿ ನಗರದ ತಾ.ಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಲ್ಲಿನ ರಾಜಕೀಯ ಪರಿಸ್ಥಿತಿಯೇ ಬೇರೆ ರೀತಿ ಇದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಧಿಕಾರ ವಹಿಸಿಕೊಂಡಾಗಲೇ ಅಲ್ಲಿನ ಪರಿಸ್ಥಿತಿ ನನ್ನ ಗಮನಕ್ಕೆ ಬಂದದ್ದು, ದಕ್ಷ ಅಧಿಕಾರಿಗಳಿಗೆ ಅಲ್ಲಿ ಕೆಲಸ ಮಾಡಲು ಬಿಡುವುದೇ ಇಲ್ಲ. ಹಾಸನ ಡಿಸಿ ಸತ್ಯಭಾಮರವರು ಮತ್ತು ನಾನು ಇಲ್ಲದಿದ್ದರೆ ಈ ಭಾಗಕ್ಕೆ ಎತ್ತಿನಹೊಳೆ ನೀರು ಹರಿಸಲು ಸಾದ್ಯವಾಗುತ್ತಿರಲಿಲ್ಲ. ಹಾಸನ ಡಿಸಿ ಸತ್ಯಭಾಮರವರು ಎತ್ತಿನಹೊಳೆ ಯೋಜನೆಗೆ ಹೆಚ್ಚಿನ ಶ್ರಮ ವಹಿಸಿದ್ದು, ಇಂಜಿನಿಯರ್ ಗಳು ಕಷ್ಟ ಪಟ್ಟು ಕೆಲಸ ಮಾಡಿದ್ದಾರೆ. ಇಷ್ಟೆಲ್ಲ ಕಷ್ಟು ಪಟ್ಟು ನಾವು ಈ ಭಾಗಕ್ಕೆ ನೀರು ಹರಿಸಲು ಯತ್ನಿಸುತ್ತಿದ್ದರೆ ಇಲ್ಲಿ ಕೆನಾಲ್ ತೆಗೆಯಲೂ ಸಾದ್ಯವಾಗುತ್ತಿಲ್ಲ ಎಂದರೆ ಹೇಗೆ..? ಎಂದು ಎತ್ತಿನಹೊಳೆ ಯೋಜನೆಯ ಅಧಿಕಾರಿಗಳಿಗೆ ಚಾಟಿ ಬೀಸಿದರು.

 

ಕೃಷಿ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಸವಲತ್ತು ಸಿಗುತ್ತಿಲ್ಲ ಎಂಬ ಬಗ್ಗೆ ದೂರುಗಳಿದ್ದು, ಅರ್ಹ ರೈತರಿಗೆ ಸವಲತ್ತು ಕೊಡಿಸಿ ಆದರೆ ಇಲಾಖೆ ಅಧಿಕಾರಿಗಳು ಶಾಮೀಲಾಗಿ ಬಂಡವಾಳ ಶಾಹಿಗಳಿಗೆ ಸವಲತ್ತು ವಿತರಿಸುತ್ತಿದ್ದಾರೆ ಎಂಬ ಆರೋಪಗಳಿವೆ ಇದರ ಬಗ್ಗೆ ಗಮನ ಹರಿಸಿ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತರಾಯಪ್ಪನವರಿಗೆ ಸೂಚನೆ ನೀಡಿದರು.

ಇಲಾಖೆಗಳಲ್ಲಿ ಹಿರಿಯ ಅಧಿಕಾರಿಗಳು ಅಸಡ್ಡೆ ತೋರಿದರೆ ಕಿರಿಯ ಅಧಿಕಾರಿಗಳು ಕಚೇರಿಗೆ ಬಂದು ನಿದ್ದೆ ಮಾಡಿ ಹೋಗುತ್ತಾರೆ. ಹಿರಿಯ ಅಧಿಕಾರಿಗಳು ಇದರ ಬಗ್ಗೆ ಎಚ್ಚರ ವಹಿಸಬೇಕು. ಕೆಲ ಪಿಡಿಓ ಗಳು ಕೇಂದ್ರ ಸ್ಥಾನದಲ್ಲೇ ಇರುವುದಿಲ್ಲ. ಎಲ್ಲೋ ಇದ್ದುಕೊಂಡು ವರದಿ ತರಿಸಿಕೊಳ್ಳುತ್ತಾರೆ. ನೀವು ಪಂಚಾಯ್ತಿ ಸರಿಯಾಗಿ ವಿಸಿಟ್ ಮಾಡುವುದಿಲ್ಲ. ಹಿರಿಯ ಅಧಿಕಾರಿಗಳು ಅಸಡ್ಡೆ ತೋರಿದರೆ ಕಿರಿಯ ಅಧಿಕಾರಿಗಳು ಕಚೇರಿಗೆ ಬಂದು ನಿದ್ದೆ ಮಾಡಿ ಹೋಗುತ್ತಾರೆ. ಹಿರಿಯ ಅಧಿಕಾರಿಗಳು ಇದರ ಬಗ್ಗೆ ಎಚ್ಚರ ವಹಿಸಬೇಕು.

ಕೆಲ ಪಿಡಿಓ ಗಳು ಕೇಂದ್ರ ಸ್ಥಾನದಲ್ಲೇ ಇರುವುದಿಲ್ಲ. ಎಲ್ಲೋ ಇದ್ದುಕೊಂಡು ವರದಿ ತರಿಸಿಕೊಳ್ಳುತ್ತಾರೆ. ನೀವು ಒಂದೇ ಒಂದು ಪಂಚಾಯ್ತಿ ವಿಸಿಟ್ ಮಾಡುವುದಿಲ್ಲ. ಇದರ ಬಗ್ಗೆ ಗಮನಹರಿಸಿ ಎಂದು ತಾ.ಪಂ ಇಓ ಲಕ್ಷ್ಮಣ್ ಗೆ ಸೂಚನೆ ನೀಡಿದರು.

 

 

ಅರಣ್ಯ ಇಲಾಖೆಯ ಸವಲತ್ತುಗಳ ಬಗ್ಗೆ ವಲಯ ಅರಣ್ಯಾಧಿಕಾರಿ ಸುರೇಶ್ ಬಳಿ ಸಚಿವರು ಮಾಹಿತಿ ಕೇಳಿದಾಗ, ತಿಮ್ಮಲಾಪುರ ಅರಣ್ಯ ಅಭಿವೃದ್ದಿಗೆ ಕಳೆದ
7 ವರ್ಷದಲ್ಲಿ 17.4 ಕೋಟಿ ಹಣ ಮಂಜೂರಾಗಿದ್ದು, ಈಗ 3 ಕೋಟಿ ಹಣ ಇದೆ. ಇದರಲ್ಲಿ ತಿಮ್ಮಲಾಪುರ ಅರಣ್ಯ ಭಾಗದಲ್ಲಿ ಚೆಕ್ ಡ್ಯಾಂ ಗಳ ನಿರ್ಮಾಣ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಅರಣ್ಯದಲ್ಲಿ ವನ್ಯ ಜೀವಿಗಳಿಗೆ ಕುಡಿಯುವ ನೀರು ಸಿಗುವಂತೆ ನೋಡಿಕೊಳ್ಳಿ, ಎಂದು ಸಚಿವರು ಸೂಚನೆ ನೀಡಿದರು. ಅರಣ್ಯ ಪ್ರದೇಶದಲ್ಲಿ ಮಿನಿ ಕೆರೆಗಳನ್ನು ಮಾಡಿದಲ್ಲಿ ಇದರಿಂದ ಬೇಸಿಗೆಯಲ್ಲೂ ನೀರು ಸಿಗಲಿದೆ ಎಂದು ಜಿ.ಪಂ ಸಿಇಓ ಮಾಹಿತಿ ನೀಡಿದರು.

 

 

ಬಿಸಿಎಂ ಹಾಸ್ಟೆಲ್ ಗಳಲ್ಲಿ ಶನಿವಾರದ ಬೆಳಗಿನ ಕ್ಲಾಸ್ ಗೆ ಹೋಡುವ ಹುಡುಗರಿಗೆ ತಿಂಡಿ ಕೊಡುತ್ತಿಲ್ಲ ಎಂಬ ದೂರುಗಳಿವೆ. ತುಮಕೂರು ರಸ್ತೆಯಲ್ಲಿರುವ ಯಾದವ ಸಮುದಾಯದ ಪಕ್ಕದಲ್ಲಿರುವ ಬಿಸಿಎಂ ಹಾಸ್ಟೆಲ್ ಗೆ ನಾನೇ ಖುದ್ದಾಗಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಶನಿವಾರ ಬೆಳಗ್ಗೆ ಮಕ್ಕಳಿಗೆ ತಿಂಡಿ ನೀಡದೇ ಶಾಲೆಗೆ ಕಳುಹಿಸಲಾಗಿದೆ. ಇರಲಿ ಶನಿವಾರದ ಹಿನ್ನೆಲೆಯಲ್ಲಿ ಶಾಲೆಗೆ ಬೇಗ ಹೋಗಿರಬಹುದು. ಆದರೆ ಬಂದ ನಂತರವಾದರೂ ತಿಂಡಿಯ ವ್ಯವಸ್ಥೆ ಮಾಡಬಹುದಲ್ಲ. ಆಗಲೂ ತಿಂಡಿ ನೀಡಿಲ್ಲ. ಹೀಗಾದರೆ ಮಕ್ಕಳ ಗತಿ ಏನಾಗಬೇಕು..? ನಾನು ಬೇಟಿ ನೀಡಿದಾಗ ವಾರ್ಡನ್ ಹೆದರಿಕೊಂಡು ಹಾಸ್ಟೆಲ್ ಕಡೆ ಬರಲೇ ಇಲ್ಲ..! ಮುಂದೆ ಇಂತಹ ದೂರುಗಳು ಬರದಂತೆ ಗಮನಹರಿಸಿ ಎಂದು ಬಿಸಿಎಂ ಅಧಿಕಾರಿ ಜಯರಾಂ ಅವರಿಗೆ ಸೂಚನೆ ನೀಡಿದರು.

ಮುಂದಿನ ತಿಂಗಳು ಜಿಲ್ಲೆಗೆ ಮುಖ್ಯಮಂತ್ರಿಗಳ ಕಾರ್ಯಕ್ರಮ ನಿಗಧಿಯಾಗಿದ್ದು, ಈ ಕಾರ್ಯಕ್ರಮದಲ್ಲಿ
ತಾಲೂಕಿನಲ್ಲಿ ಸೊಸೈಟಿ ಗೆ 10 ಹಸುಗಳಂತೆ ಒಂದು ಸಾವಿರ ರೈತರಿಗೆ ಸಹಾಯದನದಲ್ಲಿ ಹಸ ಗಳ ವಿತರಣೆಗೆ ಕ್ರಮ ಕೈಗೊಳ್ಳಲು ಉದ್ದೇಶಿಸಿದ್ದು, ಫಲಾನುಭವಿಗಳ ಪಟ್ಟಿ ತಯಾರಿಸಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

 

 

 

ಕಾರ್ಮಿಕ ಇಲಾಖೆಯಲ್ಲಿ ಎಷ್ಟು ಫಲಾನುಭವಿಗಳಿಗೆ ಕಿಟ್ ಗಳನ್ನು ವಿತರಿಸಿದ್ದೀರಾ…ಎಂದು ಸಚಿವರು ಮಾಹಿತಿ ಕೇಳಿದಾಗ ತಾಲೂಕಿನಲ್ಲಿ ಮೂರು ತಿಂಗಳ ಹಿಂದೆ 1600 ಕಿಟ್ ಬಂದಿದೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿ ಶಿರೋಜ್ ಖಾನ್ ಮಾಹಿತಿ ನೀಡಿದಾಗ, ಫಲಾನುಭವಿಗಳಿಗೆ ವರ್ಷ ಬಿಟ್ಟು ಸವಲತ್ತು ಕೊಡುತ್ತೀರಾ…ಮೂರು ತಿಂಗಳಿಂದ ಏನು ಮಾಡುತ್ತಿದ್ದೀರ..? ಎಂದು ಪ್ರಶ್ನಿಸಿದ ಸಚಿವರು ತುರ್ತು ವಿತರಣೆಗೆ ಕ್ರಮ ವಹಿಸಿ ಎಂದು ಸೂಚನೆ ನೀಡಿದರು.

 

 

 

ಹಾಸ್ಟೆಲ್ ಮಕ್ಕಳಿಗೆ ಯಾರ ಮೇಲೂ ದ್ವೇಷ ಇರುವುದಿಲ್ಲ. ಬಹಳಷ್ಟು ಹಾಸ್ಟೆಲ್ ಗಳಲ್ಲಿ ಬಡ ಮಕ್ಕಳೇ ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಕಾಲ ಕಾಲಕ್ಕೆ ಗುಣಮಟ್ಟದ ಊಟದ ವ್ಯವಸ್ಥೆ ನೀಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗೂ ವಿದ್ಯಾರ್ಥಿ ವೇತನ ದೊರೆಯುವಂತೆ ಕ್ರಮ ವಹಿಸಬೇಕು
ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದಿನೇಶ್ ರವರಿಗೆ ಸಚಿವರು ಸೂಚನೆ ನೀಡಿದರು.

 

 

 

ಬೀಮಸಂದ್ರ ಅಂಗನವಾಡಿ ಕಟ್ಟಡ ಕಾಮಗಾರಿ ತುರ್ತಾಗಿ ಮಾಡಬೇಕು ಎಂದು ಸ್ಥಳಕ್ಕೆ ಬೇಟಿ ನೀಡಿ ಸೂಚಿಸಿದ್ದರೂ ಏಕೆ ಮಾಡಲಿಲ್ಲ. ಒಂದು ವಾರದಲ್ಲಿ ಆರಂಭವಾಗಬೇಕು ಎಂದು ಸಚಿವರು ಸೂಚನೆ ನೀಡಿರುತ್ತಾರೆ. ತಾಲೂಕಿನಲ್ಲಿ ಒಟ್ಟು 150 ಅಂಗನವಾಡಿ ಗಳು ದುರಸ್ತಿ ಮಾಡಬೇಕಿದ್ದು, ಈ ವರ್ಷ ಕನಿಷ್ಠ 75 ಅಂಗನವಾಡಿ ಗಳ ದುರಸ್ತಿಯಾಗಬೇಕಿದೆ ಎಂದು ಸಿಇಓ ಪ್ರಭು ಸಚಿವರಿಗೆ ಮಾಹಿತಿ ನೀಡಿದರು.

 

 

 

ಜಿಲ್ಲೆಯಲ್ಲಿ ಪ್ರತೀ ತಾಲೂಕಿಗೆ ಎನ್.ಆರ್.ಇ.ಜಿ ಯೋಜನೆಯಲ್ಲಿ 239 ಕೋಟಿ ಮಂಜೂರಾತಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಪ್ರತೀ ತಾಲೂಕಿನಲ್ಲಿ ಕನಿಷ್ಠ ನೂರು ಕೋಟಿಯಷ್ಟು ಎನ್.ಆರ್.ಇ.ಜಿ ಯೋಜನೆಯಡಿ ಖರ್ಚು ಮಾಡಬಹುದಾಗಿದ್ದು, ಇದರ ಬಗ್ಗೆ ಪಿಡಿಓ ಗಳಿಗೆ ನಿರ್ದೇಶನ ನೀಡಬೇಕು ಸಿಇಓ ಸಚಿವರಿಗೆ ಮನವಿ ಮಾಡಿದರು.

 

 

 

ಹಿಂದೂಪುರ ರಸ್ತೆಯಲ್ಲಿರುವ ಹಳೆಯ ರೇಷ್ಮೆ ಇಲಾಖೆ ಕಟ್ಟಡದಲ್ಲಿ ಆರ್ ಟಿ ಓ ಕಚೇರಿಯನ್ನು ನಿರ್ಮಿಸಲು ಸರ್ಕಾರ ಮಂಜೂರಾತಿ ನೀಡಿದ್ದು, ಶ್ರೀಘ್ರದಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭಿಸಲು ಆರ್‌ಟಿಓ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಪೋಲೀಸರೆಂದರೆ ಕಿಡಿಗೇಡಿಗಳಿಗೆ, ಪಡ್ಡೆ ಹುಡುಗರಿಗೆ ಭಯ ಇರಬೇಕು. ಆದರೆ ಅಂತಹ ವಾತಾವರಣವೇ ಸೃಷ್ಟಿಯಾಗುತ್ತಿಲ್ಲ. ಪಟ್ಟಣದ ಬೈಪಾಸ್ ಗಳಲ್ಲಿ ಮತ್ತು ಕೆಲ ಭಾಗಗಳಲ್ಲಿ ಪಡೆ ಹುಡುಗರು ಹೆಣ್ಣು ಮಕ್ಕಳನ್ನು ಚುಡಾಯಿಸುವ ಪ್ರಕರಣಗಳು ವರದಿಯಾಗುತ್ತಿವೆ. ಗಾಂಜಾ, ಅಫೀಮ್ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳೂ ಕೇಳಿ ಬರುತ್ತಿವೆ. ಇದನ್ನು ಮಟ್ಟ ಹಾಕುವುದು ದೊಡ್ಡ ಕೆಲಸವೇನಲ್ಲ. ಇದರ ಬಗ್ಗೆ ಕ್ರಮ ಕೈ ಗೊಳ್ಳಿ. ಸಂತೆಯಲ್ಲಿ ಪಿಕ್ ಪಾಕೆಟ್ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ದೂರುಗಳಿವೆ. ಸಿಬ್ಬಂದಿಗಳು ಮಫ್ತಿಯಲ್ಲಿದ್ದು, ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಸ್ಪಿ ಅಶೋಕ್ ರವರಿಗೆ ಸಚಿವರು ಸೂಚನೆ ನೀಡಿದರು.

 

*ಜನವರಿಗೆ ಕೇಬಲ್ ಕಾರ್ ಗೆ ಶಂಕುಸ್ಥಾಪನೆ :*

 

ಮುಂಬರುವ ಜನವರಿಗೆ ಕೇಬಲ್ ಕಾರ್ ಗೆ ಶಂಕುಸ್ಥಾಪನೆ ನೆರವೇರಿಸಲು ಉದ್ದೇಶಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ರವರನ್ನು ಕ್ಷೇತ್ರಕ್ಕೆ ಕರೆಸಿ ಕೇಬಲ್ ಕಾರ್ ಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಸಚಿವ ರಾಜಣ್ಣ ಮಾಹಿತಿ ನೀಡಿದರು.

 

 

 

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ, ಡಿಸಿ ಶುಭ ಕಲ್ಯಾಣ್, ಜಿ.ಪಂ ಸಿಇಓ ಪ್ರಭು, ಎಸ್.ಪಿ. ಅಶೋಕ್, ಎಸಿ ಗೋಟೂರು ಶಿವಪ್ಪ, ತಾ.ಪಂ ಆಡಳಿತಾಧಿಕಾರಿ ಸೋನಿಯಾ ವರ್ಣಿಕರ್,ತಹಶೀಲ್ದಾರ್ ಶೀರಿನ್ ತಾಜ್, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚೌಡಪ್ಪ, ಇಓ ಲಕ್ಷ್ಮಣ್, ಬಗರ್ ಹುಕುಂ ಕಮಿಟಿ ಸದಸ್ಯ ಎಂ.ಎಸ್ ಮಲ್ಲಿಕಾರ್ಜುನಯ್ಯ, ಪುರಸಭಾಧ್ಯಕ್ಷ ಲಾಲಾಪೇಟೆ ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ನಾಗೇಶ್ ಬಾಬು, ಮತ್ತು ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *