ರಾಜ್ಯಮಟ್ಟದ ಸುವರ್ಣ ಸಂಭ್ರಮ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ರಾಜ್ಯಧ್ಯಕ್ಷ ಶಿವಾನಂದತಗಡೂರು ಸಲಹೆ

ತುಮಕೂರು: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿ ವರ್ಷವೂ ಪತ್ರಕರ್ತರಿಗಾಗಿ ಕ್ರೀಡಾಕೂಟಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದು ಈ ಬಾರಿ ಕಲ್ಪತರು ನಗರಿ ತುಮಕೂರಿಗೆ ಈ ಕ್ರೀಡಾಕೂಟ ಆಯೋಜನೆ ಮಾಡುವ ಅವಕಾಶ ಸಿಕ್ಕಿದೆ ಈ ಹಿನ್ನೆಲೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ 50 ಎಂಬ ಘೋಷವಾಕ್ಯ ಅಡಿಯಲ್ಲಿ ಕ್ರೀಡಾಕೂಟವನ್ನು ಆ ಯೋಜನೆ ಮಾಡಲಾಗುತ್ತಿದ್ದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಈಗಾಗಲೇ ಹಲವು ಉಪಸಮಿತಿಗಳನ್ನ ರಚನೆ ಮಾಡಿಕೊಂಡ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಕರ್ನಾಟಕ ಸುವರ್ಣ ಸಂಭ್ರಮ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ರವರು ಸಲಹೆ ನೀಡಿದರು.

 

ನಗರದ ಪತ್ರಿಕಾ ಭವನದಲ್ಲಿ ಈ ಕುರಿತಾಗಿ ಹಲವು ಉಪಸಮಿತಿಗಳ ಸದಸ್ಯರುಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಸದಾ ಸುದ್ದಿ ಸಮಾಚಾರಗಳನ್ನು ಒತ್ತು ತರುವ ಪತ್ರಕರ್ತರಿಗೆ ಕ್ರೀಡೆ ಆಟೋಟಗಳನ್ನು ನಡೆಸುವುದು ಸಂಘದ ಜವಾಬ್ದಾರಿ ಆಗಿದ್ದು ಈ ಹಿನ್ನೆಲೆಯಲ್ಲಿ ತುಮಕೂರು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುವ ಈ ಕ್ರೀಡಾಕೂಟವನ್ನು ಜಿಲ್ಲೆಯ ವಿವಿಧ ಗಣ್ಯ ಮಾನ್ಯರು, ರಾಜಕೀಯ ಮುಖಂಡರುಗಳು ಉದ್ಘಾಟನೆ ಮಾಡಲಿದ್ದು ಇದಕ್ಕೆ ಪೂರಕವಾಗಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

 

 

ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯದ್ಯಂತ ವಿವಿಧ ಜಿಲ್ಲೆಗಳಲ್ಲಿ ತಮ್ಮ ಘಟಕಗಳನ್ನು ಹೊಂದಿದ್ದು ಕ್ರೀಡೆಯಲ್ಲಿ ಭಾಗವಹಿಸಲು ವಿವಿಧ ಜಿಲ್ಲೆಗಳಿಂದ ಪತ್ರಕರ್ತರು ಆಗಮಿಸಲಿದ್ದಾರೆ ಕ್ರೀಡೋತ್ಸವದಲ್ಲಿ ನಡೆಯುವ ಕಬ್ಬಡಿ ಕೊಕ್ಕೂ ರನ್ನಿಂಗ್ ರೇಸ್, ಲಾಂಗ್ ಜಂಪ್, ಶಾರ್ಟ್ ಪುಟ್, ಹಗ್ಗ ಜಗ್ಗಾಟ ಸೇರಿದಂತೆ ಹಲವು ವಿಧದ ಕ್ರೀಡೆಗಳನ್ನು ನಡೆಸುತ್ತಿದ್ದು ಜಿಲ್ಲಾಡಳಿತ ಸೇರಿದಂತೆ ಹಲವು ಕ್ರೀಡಾ ಸಂಸ್ಥೆಗಳ ಕ್ರೀಡಾ ನಿರ್ಣಯಕರನ್ನು ನೇಮಿಸಿಕೊಂಡು ಅತ್ಯುತ್ತಮವಾಗಿ ಕ್ರೀಡೆಗಳನ್ನು ನಡೆಸಬೇಕು ವಿವಿಧ ಜಿಲ್ಲೆಗಳಿಂದ ಬರುವ ಪತ್ರಕರ್ತರಿಗೆ ವಸತಿ ವ್ಯವಸ್ಥೆ, ಅಚ್ಚುಕಟ್ಟಾದ ಸುಚಿತ್ವದ ಊಟದ ವ್ಯವಸ್ಥೆ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಕ್ರೀಡೋತ್ಸವದ ದಿನದಂದು ವಿವಿಧ ತಂಡಗಳನ್ನು ಕಟ್ಟಿಕೊಂಡು ಮೆರವಣಿಗೆ ನಡೆಸುವುದು ಮತ್ತು ಕ್ರೀಡಾಂಗಣದಲ್ಲಿ ಧ್ವಜವಂದನೆ, ಜ್ಯೋತಿ ವಂದನೇ ತಾಲೀಮು ಸಿದ್ಧತೆಗೊಳಿಸುವುದು ಸೇರಿದಂತೆ ಕ್ರೀಡೆಗೆ ಸಂಬಂಧಪಟ್ಟ ಎಲ್ಲಾ ರೀತಿಯ ಚಟುವಟಿಕೆಗಳನ್ನು ಪೂರ್ವಭಾವಿಯಾಗಿ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.

 

ತುಮಕೂರು ಜಿಲ್ಲಾಧ್ಯಂತ ಸುವರ್ಣ ಸಂಭ್ರಮ ಕ್ರೀಡಾಕೂಟದ ಜ್ಯೋತಿ ಸಂಚಾರ

 

 

ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಪತ್ರಕರ್ತರಿಗಾಗಿ ನಡೆಯುವ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಎಂದು ಈಗಾಗಲೇ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಆಶಯ ವ್ಯಕ್ತಪಡಿಸಿದ್ದು ಈ ಹಿನ್ನೆಲೆಯಲ್ಲಿ ಕ್ರೀಡೋತ್ಸವ ಉದ್ಘಾಟನೆಗೆ ಮೊದಲೇ ಜಿಲ್ಲೆಯ ಹತ್ತು ತಾಲೂಕುಗಳಲ್ಲಿ ಕ್ರೀಡಾ ಜ್ಯೋತಿಯನ್ನು ಸಂಚರಿಸುವ ಮೂಲಕ ಸುವರ್ಣ ಸಂಭ್ರಮ ಕ್ರೀಡೋತ್ಸವದ ಬಗ್ಗೆ ಸಾರ್ವಜನಿಕರಲ್ಲಿ ಪ್ರಚಾರಗೊಳಿಸಬೇಕು ಇದರ ಸಲುವಾಗಿ ಕ್ರೀಡಾ ಜ್ಯೋತಿಯು ಪ್ರತಿ ತಾಲೂಕಿನಲ್ಲಿಯೂ ಸಂಚಾರ ಮಾಡಿ ಆಗಮಿಸಬೇಕು ಇದರ ಜವಾಬ್ದಾರಿಗಳನ್ನು ಆಯಾ ತಾಲೋಕುಗಳ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮುಂದೆ ನಿಂತು ನಡೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

 

ಜಿಲ್ಲಾಧ್ಯಕ್ಷ ಚೀನಿ ಪುರುಷೋತ್ತಮ್ ಅವರು ಮಾತನಾಡಿ ತುಮಕೂರು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪತ್ರಕರ್ತರಿಗಾಗಿ ದೊಡ್ಡಮಟ್ಟದ ಕ್ರೀಡೋತ್ಸವ ಸಂಭ್ರಮವನ್ನು ಮಾಡಲಾಗಿದೆ ಇದಕ್ಕೆ ಜಿಲ್ಲಾಡಳಿತ ಸೇರಿದಂತೆ ಕೇಂದ್ರದ ಮಂತ್ರಿಗಳು, ರಾಜ್ಯದ ಮಂತ್ರಿಗಳು ಶಾಸಕರುಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರವು ಇದೆ ಈಗಾಗಲೇ ಕ್ರೀಡಾಂಗಣದ ಸಿದ್ಧತೆ ಸೇರಿದಂತೆ ಕ್ರೀಡಾಪಟುಗಳ ಅಭ್ಯಾಸ ಕಾರ್ಯವು ನಡೆಯುತ್ತಿದೆ ರಾಜ್ಯಾಧ್ಯಕ್ಷರ ಸಲಹೆಯಂತೆ ಬರುವ ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆ, ಊಟದ ವ್ಯವಸ್ಥೆ ಸೇರಿದಂತೆ ಇನ್ನಿತರ ಸಕಲ ರೀತಿಯ ಸೌಲಭ್ಯಗಳನ್ನು ನೀಡುವಲ್ಲಿ ಜಿಲ್ಲಾ ಸಂಘಟನೆ ಸನ್ನದ್ದವಾಗಿದೆ ಈಗಾಗಲೇ ಜಿಲ್ಲಾ ಘಟಕದ ವತಿಯಿಂದ ಹಲವು ಸಭೆಗಳನ್ನು ನಡೆಸಿ ಉಪ ಸಮಿತಿಗಳನ್ನ ರಚನೆ ಮಾಡಿ ಇದಕ್ಕೆ ಪೂರಕ ಎಂಬಂತೆ ಜಿಲ್ಲಾಧಿಕಾರಿಗಳು, ಸಿಇಓ, ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ಉಪ ಸಮಿತಿಯಲ್ಲಿ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ ಅಲ್ಲದೆ ವಿವಿಧ ಪತ್ರಕರ್ತರುಗಳನ್ನು ಉಪಸಮಿತಿಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡಿಕೊಂಡು ಸುವರ್ಣ ಸಂಭ್ರಮ ಕ್ರೀಡಾತ್ಸವವನ್ನು ಯಶಸ್ವಿಗೊಳಿಸಲು ಎಲ್ಲಾ ರೀತಿಯ ತಯಾರಿ ನಡೆಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವತಿಯಿಂದ 25ನೇ ವರ್ಷದ ರಾಜತಾ ಮಹೋತ್ಸವಕ್ಕೆ ಆಗಮಿಸಿದ ಅಯೋಧ್ಯೆಯ ಬಾಲ ರಾಮನ ಮೂರ್ತಿಯನ್ನು ಕೆತ್ತನೆ ಮಾಡಿದ ಪ್ರಧಾನ ಶಿಲ್ಪಿ ಡಾಕ್ಟರ್ ಅರುಣ್ ಯೋಗಿರಾಜು ಅವರನ್ನು ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕದ ವತಿಯಿಂದ ಅಭಿನಂದಿಸಲಾಯಿತು.

 

 

ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್, ರಾಷ್ಟ್ರೀಯ ಮಂಡಳಿ ಸದಸ್ಯರುಗಳಾದ ಡಿ ಎಂ ಸತೀಶ್, ಮಧುಕರ್ ಜಿಲ್ಲಾ ಉಪಾಧ್ಯಕ್ಷ ಚಿಕ್ಕರಪ್ಪ, ಪ್ರಧಾನ ಕಾರ್ಯದರ್ಶಿ ರಘುರಾಮ್ ಸೇರಿದಂತೆ ಸಂಘದ ಪದಾಧಿಕಾರಿಗಳಾದ ಸತೀಶ್ ಹಾರೋಗೆರೆ , ಕಾಗ್ಗೆರೆ ಸುರೇಶ್, ರೇಣುಕ ಪ್ರಸಾದ್, ಶಾನಾ ಪ್ರಸನ್ನಮೂರ್ತಿ ಕುಚ್ಚಂಗಿ ಪ್ರಸನ್ನ, ಶ್ರೀವತ್ಸ, ರಂಗರಾಜು.ಎನ್.ಡಿ., ಜಯಣ್ಣ ಬೆಳಗೆರೆ, ರಾಕ್ಲೈನ್ ರವಿ, ಸೇರಿದಂತೆ ವಿವಿಧ ಉಪಸಮಿತಿಗಳ ಮುಖಂಡರುಗಳು ಸದಸ್ಯರುಗಳು ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರಿದ್ದರು.

Leave a Reply

Your email address will not be published. Required fields are marked *