ಸಮಾಜದ ಎರಡು ಕಣ್ಣುಗಳ ನಡುವೆ ಬೆಂಕಿ ಹಚ್ಚಿದವರ್ಯಾರು ಸಾರ್ವಜನಿಕರ ಪ್ರಶ್ನೆ ?

ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದ ಜನಸಾಮಾನ್ಯರಿಗೆ ನ್ಯಾಯ ಒದಗಿಸುವಂತಹ ನ್ಯಾಯವಾದಿಗಳ ಮತ್ತು ಜನರ ರಕ್ಷಣೆ ಮಾಡುವಂತಹ ಪೊಲೀಸ್ ಸಿಬ್ಬಂದಿಗಳ ನಡುವಿನ ವೈ ಮನಸ್ಸಿಗೆ ಕಾರಣವೇನೆಂಬುದು ಜನರ ಮನಸ್ಸಿನಲ್ಲಿ ಗೊಂದಲ ಸೃಷ್ಟಿಸಿರುವುದು ನಿಜಕ್ಕೂ ಆತಂಕಕಾರಿಯಾದ ವಿಷಯವಾಗಿದೆ ಎಂದು ತುಮಕೂರು ಜನತೆಯಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ.

ಪೋಲಿಸ್ ಸಿಬ್ಬಂದಿಗಳು ಹಾಗೂ ನ್ಯಾಯವಾದಿಗಳು ಒಂದೇ ನಾಣ್ಯದ ಎರಡು ಮುಖಗಳು ಜನಸಾಮಾನ್ಯರಿಗೆ ಏನಾದರೂ ಅನ್ಯಾಯವಾದರೆ ಮೊದಲು ಪೊಲೀಸ್ ಠಾಣೆಗೆ ಹೋಗಿ ತಮಗೆ ರಕ್ಷಣೆ ಪಡೆದು ನಂತರ ನ್ಯಾಯವಾದಿಗಳ ಬಳಿ ಹೋಗುವ ಮುಖಾಂತರ ತಮಗೆ ಆದಂತಹ ಅನ್ಯಾಯಕ್ಕೆ ನ್ಯಾಯ ಕಂಡುಕೊಳ್ಳುವ ಬಗ್ಗೆ ಚಿಂತಿಸುತ್ತಾರೆ ಆದರೆ ಇತ್ತೀಚೆಗಷ್ಟೇ ತುಮಕೂರಿನ ನ್ಯಾಯಾಲಯದ ಸಂಕೀರ್ಣದಲ್ಲಿ ನ್ಯಾಯವಾದಿಗಳು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳ ನಡುವೆ ನಡೆದ ಘಟನೆಯ ವಿಷಯವಾಗಿ ಜನರ ಮನಸ್ಸಿನಲ್ಲಿ ಗೊಂದಲ ಸೃಷ್ಟಿಯಾಗಿದೆ ಯಾಕೆಂದರೆ ತುಮಕೂರಿನ ನ್ಯಾಯಾಲಯಕ್ಕೆ ಒಂದು ಇತಿಹಾಸವಿದೆ ತುಮಕೂರಿನ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನ್ಯಾಯವಾದಿಗಳು ಬಹಳ ಸೌಮ್ಯ ಸ್ವಭಾವದವರು ಮಾತೃ ಹೃದಯ ಹೊಂದಿರುವವರು ಇಲ್ಲಿನ ಅದೆಷ್ಟೋ ನ್ಯಾಯವಾದಿಗಳು ಇಲ್ಲಿಗೆ ನೊಂದು ಬೆಂದು ಬಂದಂತಹ ಬಡವರಿಗೆ ಅಸಹಾಯಕರಿಗೆ ಸಾಕಷ್ಟು ನ್ಯಾಯ ದೊರಕಿಸಿ ಕೊಡುವ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಉನ್ನತ ಮಟ್ಟದ ನ್ಯಾಯಾಧೀಶರಾಗಿ, ಲೋಕಾಯುಕ್ತ ಅಧಿಕಾರಿಗಳಾಗಿ ಹೋಗಿರುವ ಉದಾಹರಣೆಗಳನ್ನು ಸಾಕಷ್ಟು ಕಾಣಬಹುದಾಗಿದೆ.

ಇನ್ನು ಸಾಕಷ್ಟು ಮಾತೃ ಹೃದಯ ಹೊಂದಿರುವ ಹಿರಿಯ ನ್ಯಾಯವಾದಿಗಳು ಸಹ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೂಲಕ ನೊಂದು ಬೆಂದು ಅನ್ಯಾಯಕ್ಕೆ ಒಳಗಾದ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತಾ ತುಮಕೂರಿನ ಕೀರ್ತಿ ಉಳಿಸಿ ಬೆಳೆಸುವಂತಹ ಕೆಲಸ ಮಾಡುತ್ತಿರುವುದನ್ನು ನಾವು ನೀವೆಲ್ಲರೂ ಕಾಣಬಹುದಾಗಿದೆ ಇಂತಹ ಸಂದರ್ಭದಲ್ಲಿ ನಾಗರಿಕ ಸಮಾಜದ ಎರಡು ಕಣ್ಣುಗಳಾಗಿ ಕೆಲಸ ನಿರ್ವಹಿಸುತ್ತಿರುವ ವಕೀಲರು ಮತ್ತು ಪೊಲೀಸರ ನಡುವೆ ಬೆಂಕಿ ಹಚ್ಚಿದವರು ಯಾರು ? ಎಂಬುದು ಸಾರ್ವಜನಿಕರಲ್ಲಿ ಚರ್ಚೆ ನಡೆಯುತ್ತಿದೆ.

 

 

ಇಷ್ಟಕ್ಕೂ ವಕೀಲರು ಮತ್ತು ಪೊಲೀಸ್ ಸಿಬ್ಬಂದಿಗಳ ಮಧ್ಯೆ ನಡೆದ ಘಟನೆಗೆ ಮುಖ್ಯ ಕಾರಣವಾದರೂ ಏನು? ಎಂಬುದು ತಿಳಿಯದಾಗಿದೆ ಇದರಲ್ಲಿ ಯಾರದು ಸರಿ ಯಾರದು ತಪ್ಪು ಒಂದು ವೇಳೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ತಪ್ಪಾಗಿದ್ದರೆ ಅವರ ಹಿರಿಯ ಅಧಿಕಾರಿಗಳ ಮೌನದ ಹಿಂದಿನ ಕಾರಣವೇನು ಇರಬಹುದು ಅಥವಾ ನ್ಯಾಯವಾದಿಗಳ ತಪ್ಪಿದ್ದರೆ ಅವರ ಹಿರಿಯ ನ್ಯಾಯವಾದಿಗಳ ಮೌನವೇಕೆ ಈಗಾಗಲೇ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರಿಂದ ವಕೀಲರ ಮೇಲೆ ಹಲ್ಲೆ ವಕೀಲರಿಂದ ಪೊಲೀಸರ ಮೇಲೆ ಹಲ್ಲೆ ಎಂಬ ವಿಚಾರಗಳು ಹರಿದಾಡುತ್ತಿದ್ದು ಇದರ ಮೂಲ ಸತ್ಯ ಸತ್ಯತೆ ಗಳನ್ನು ಜನರಿಗೆ ತಿಳಿಸುವವರು ಯಾರು? ಕಾನೂನು ಪರಿಪಾಲನೆ ಮಾಡುವಂತಹ ವ್ಯಕ್ತಿಗಳೆ ಈ ರೀತಿಯಾದ ತಪ್ಪುಗಳನ್ನು ಮಾಡಿದರೆ ಇನ್ನೂ ಸಾಮಾನ್ಯ ಜನರು ಯಾರ ಬಳಿ ಹೋಗಿ ನ್ಯಾಯ ಕೇಳಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಚರ್ಚೆಯಾಗಿದೆ.

 

ಪೊಲೀಸ್ ಸಿಬ್ಬಂದಿಗಳು ವಕೀಲರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸರಿ ಅಷ್ಟೇ ಆದರೆ ಈ ಘಟನೆ ಯಾವ ಸ್ಥಳದಲ್ಲಿ ನಡೆಯಿತು ಯಾವ ಉದ್ದೇಶದಿಂದ ನಡೆಯಿತು ಎಂಬುದು ಮಾತ್ರ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ ಪೊಲೀಸ್ ಸಿಬ್ಬಂದಿಗಳು ಎಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಅದು ಯಾವ ರೀತಿಯ ಕರ್ತವ್ಯವಾಗಿತ್ತು ಈ ಘಟನೆ ಇಷ್ಟು ದೊಡ್ಡ ಮಟ್ಟದ ಸಮಸ್ಯೆ ಸೃಷ್ಟಿಸಬೇಕಾದರೆ ಅಂತಹ ಸಮಸ್ಯೆಯ ಜಾಗದಲ್ಲಿ ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲು ಅವರಿಗೆ ಆದೇಶ ಮಾಡಿದ ಅಧಿಕಾರಿಗಳು ಯಾರು ಅಥವಾ ಪೊಲೀಸ್ ಸಿಬ್ಬಂದಿಗಳು ಮೇಲಾಧಿಕಾರಿಗಳ ಆದೇಶವಿಲ್ಲದೆ ಹೋಗಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೇ?

ಯಾವುದೋ ಸ್ಥಳದಲ್ಲಿ ಪೋಲಿಸ್ ಸಿಬ್ಬಂದಿಗಳು ಸೂಕ್ತ ಬಂದು ಬಸ್ತ್ ನೀಡುವಾಗ ನಡೆದ ಘಟನೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದು ಬರುತ್ತಿದ್ದು ಆ ಸ್ಥಳ ಸರ್ಕಾರಿ ಜಾಗವೇ ಅಥವಾ ಖಾಸಗಿ ಜಾಗವೇ ಇಂತಹ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳನ್ನು ಸೂಕ್ತ ರಕ್ಷಣೆಗಾಗಿ ನಿಯೋಜನೆ ಮಾಡಿದ ಉದ್ದೇಶವಾದರೂ ಏನು? ವಕೀಲರು ಮತ್ತು ಪೊಲೀಸರ ನಡುವಿನ ವೈ ಮನಸ್ಸಿಗೆ ಕಾರಣವಾಗಿರುವ ಈ ಸ್ಥಳಕ್ಕೂ ಸಂಬಂಧವೇನು ಇದು ಸರ್ಕಾರಕ್ಕೆ ಸಂಬಂಧಪಟ್ಟ ಸ್ಥಳವೇ ಆಗಿದ್ದರೆ ಈ ಸ್ಥಳದ ರಕ್ಷಣೆ ಮಾಡಲು ಪೊಲೀಸ್ ಸಿಬ್ಬಂದಿಗೆ ಆದೇಶ ಮಾಡಿದ ಉನ್ನತ ಮಟ್ಟದ ಅಧಿಕಾರಿಗಳು ಈಗ ಮೌನವಾಗಿರಲು ಕಾರಣವೇನಿರಬಹುದು?ಅಥವಾ ಇತ್ತೀಚಿನ ಕೆಲವು ಸಮಾಜ ಘಾತುಕ ಶಕ್ತಿಗಳು ವಕೀಲರ ಮತ್ತು ಪೊಲೀಸರ ನಡುವಿನ ಬಾಂಧವ್ಯವನ್ನು ಹೊಡೆದು ಜನಸಾಮಾನ್ಯರಿಗೆ ತಪ್ಪು ಸಂದೇಶ ಸಾರುವಂತ ಪೂರ್ವ ನಿಯೋಜಿತ ಪಿತೂರಿಯೇ ಎಂಬುದು ತುಮಕೂರು ನಗರದ ಪ್ರಜ್ಞಾವಂತ ಬುದ್ಧಿಜೀವಿಗಳ ಮಾತಾಗಿದೆ.

Leave a Reply

Your email address will not be published. Required fields are marked *