ಶ್ರೀ ಗುರು ರುದ್ರಮುನಿ ಸ್ವಾಮಿ ದೇವಾಂಗ ಮಠ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿದ ಪೂಜ್ಯ ವೀರೇಂದ್ರ ಹೆಗ್ಗಡಿಯವರಿಗೆ  ಗ್ರಾಮಸ್ಥರ ಅಭಿನಂದನೆ 

ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಕಲ್ಲೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ
ಶ್ರೀ ಗುರು ರುದ್ರಮುನಿ ಸ್ವಾಮಿ ದೇವಾಂಗ ಮಠದ ಜೀರ್ಣೋದ್ಧಾರಕ್ಕೆ,
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ
ಪೂಜ್ಯ ವೀರೇಂದ್ರ ಹೆಗ್ಗಡೆಯವರು
ರೂ 2,00,000 ಮೊತ್ತದ ಪ್ರಸಾದ ರೂಪದ ಡಿಡಿ ಮಂಜೂರು ಮಾಡಿದ್ದು,
ಗುಬ್ಬಿ ತಾಲೂಕಿನ  ಯೋಜನಾಧಿಕಾರಿ
ರಾಜೇಶ್ ಎಸ್ ರವರು ದೇವಸ್ಥಾನ ಸಮಿತಿಯ ಪದಾಧಿಕಾರಿಗಳಿಗೆ, ರೂ.200000 ಮೊತ್ತದ
ಡಿ ಡಿ ಚೆಕ್ ಅನ್ನು ಹಸ್ತಾಂತರ ಮಾಡಿದರು,

 

ಈ ಸಂದರ್ಭ ಡಿ ಡಿ ವಿತರಣೆ ಮಾಡಿ ಮಾತನಾಡಿದ ಅವರು ಕ್ಷೇತ್ರಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ ಕ್ಷೇತ್ರವು 4 ಚತುರ್ದಾನ ಹೆಸರುವಾಸಿ ಯಾಗಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭವಾಗಿ 42 ವರ್ಷಗಳ ಕಳೆದಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಾಡುತ್ತಿರುವ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಾದ ಸುಜ್ಞಾನನಿಧಿ ಶಿಷ್ಯವೇತನ, ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಕೆರೆ ಪುನಶ್ಚೇತನ, ಜನಮಂಗಳ ಕಾರ್ಯಕ್ರಮ, ವಾತ್ಸಲ್ಯ ಮತ್ತು ಮಾಶಾಸನ, ಜ್ಞಾನದೀಪ ಕಾರ್ಯಕ್ರಮ ದಡಿಯಲ್ಲಿ ಶಾಲೆಗಳಿಗೆ ಶಿಕ್ಷಕರ ಒದಗಣೆ ,
ಹಿಂದೂ ರುದ್ರಭೂಮಿ ಅಭಿವೃದ್ಧಿ ಶುದ್ಧಗಂಗಾ ಕಾರ್ಯಕ್ರಮಗಳು, ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳಿದ್ದು ಎಲ್ಲಾ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ
ಶ್ರೀ ಗುರು ರುದ್ರಮುನಿ ಸ್ವಾಮಿ ದೇವಾಂಗ ಮಠ ದೇವಸ್ಥಾನ ಕಮಿಟಿ ಉಪಾಧ್ಯಕ್ಷ ಬೆಟ್ಟಪ್ಪ ಮಾತನಾಡಿ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಜನಪರ ಕಾರ್ಯಕ್ರಮಗಳು ಶ್ಲಾಘನೀಯ, 200000/-ಪ್ರಸಾದ ರೂಪದ ದೇಣಿಗೆ ನೀಡಿದ ಪೂಜ್ಯರಿಗೆ ನಮ್ಮ ಗ್ರಾಮಸ್ಥರ ಪರವಾಗಿ ಅಭಿನಂದನೆಗಳು ಎಂದು ತಿಳಿಸಿದರು,

 

ಈ ಸಂದರ್ಭದಲ್ಲಿ  ಅಧ್ಯಕ್ಷರಾದ ಕೆ ಸ್ ಲಿಂಗಣ್ಣ ,
ಕಾರ್ಯದರ್ಶಿ ಕೆ ನ್ ಜಯರಾಮ್ ,ಖಜಾಂಚಿ ಡಿ ವೆಂಕಟರಮಣಯ್ಯ , ನಾಗರಾಜ್, ಹಾಗೂ ಮೇಲ್ವಿಚಾರಕರಾದ ಶ್ರೀನಿವಾಸ್ ಕೆ ನ್ , ಒಕ್ಕೂಟ ಪದಾಧಿಕಾರಿಗಳಾದ ವಿಜಯಲಕ್ಷ್ಮಿ ,ಉಷಾ, ಶಿವ ನಾಗಪ್ಪ, ಹಾಗೂ ಗ್ರಾಮದ ಪ್ರಮುಖರು ಉಪಸಿತರಿದ್ದರು..

 

Leave a Reply

Your email address will not be published. Required fields are marked *