ಮಹಾರಾಷ್ಟ್ರದ ನಾಗಪುರದಲ್ಲಿ ಡಾ ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ಅವರು ಬೌದ್ಧ ಧಮ್ಮದ ದೀಕ್ಷಾ ಪಡೆದ ಭೂಮಿಯನ್ನು ದೀಕ್ಷಾ ಭೂಮಿಯೆಂದು ಗುರುತಿಸಿ ಈ ಪುಣ್ಯ ಭೂಮಿಗೆ ಬೌದ್ಧ ಧರ್ಮದ ಯಾತ್ರಾ ಕೇಂದ್ರವಾಗಿ ಪರಿಗಣಿಸಿ ಸರ್ಕಾರ ಪ್ರತಿ ವರ್ಷವೂ ನಾಗಪುರಕ್ಕೆ ಹಲವು ರಾಜ್ಯಗಳಿಂದ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳಿಗೆ ದೀಕ್ಷಾಭೂಮಿ ದರ್ಶನ ಪಡೆದು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು ಅದರಂತೆ ಕಳೆದ ಐದು ವರ್ಷಗಳಿಂದ ಕರ್ನಾಟಕ ರಾಜ್ಯದಿಂದಲೂ ಸಹ ಬಹಳಷ್ಟು ಅಂಬೇಡ್ಕರ್ ಅವರ ಅನುಯಾಯಿಗಳನ್ನು ಅಕ್ಟೋಬರ್ ತಿಂಗಳಲ್ಲಿ ನಾಗಪುರದಲ್ಲಿ ನಡೆಯುವ ಧಮ್ಮ ಪ್ರವರ್ತನಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ರೈಲು ಮತ್ತು ಬಸ್ಸುಗಳ ಮೂಲಕ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವುದರೊಂದಿಗೆ ದೀಕ್ಷಾ ಭೂಮಿಯ ಪ್ರಯಾಣದ ವೆಚ್ಚವನ್ನು ಸರ್ಕಾರವೇ ಭರಿಸುವ ವ್ಯವಸ್ಥೆ ಮಾಡಿರುವುದು ನಿಷ್ಠಾವಂತ ಅಂಬೇಡ್ಕರ್ ರವರ ಅನುಯಾಯಿಗಳಿಗೆ ಸಂತೋಷದ ವಿಚಾರವಾಗಿದೆ
ಇತ್ತೀಚಿನ ದಿನಗಳಲ್ಲಿ ದೀಕ್ಷಾ ಭೂಮಿ ಯಾತ್ರೆಗೆ ಆಯ್ಕೆಯಾಗಿ ನಾಗಪುರಕ್ಕೆ ಹೋಗುತ್ತಿರುವ ಕೆಲವು ದಲಿತ ಮುಖಂಡರ ದಾರಿ ಬದಲಾದಂತೆ ಕಾಣತೊಡಗಿದೆ ದೀಕ್ಷಾಭೂಮಿ ಯಾತ್ರೆಯ ಹೆಸರಿನಲ್ಲಿ ಕೆಲವು ಮುಖಂಡರುಗಳು ಮೋಜು ಮಸ್ತಿಯ ಕಡೆ ಮುಖ ಮಾಡುತ್ತಿರುವುದು ನಿಜಕ್ಕೂ ಸಹ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡುತ್ತಿರುವ ಅವಮಾನ ಎಂದು ಹಿರಿಯ ಹೋರಾಟಗಾರರ ಮಾತಾಗಿದೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಲವಾರು ರೀತಿಯ ಶೋಷಣೆ ಮತ್ತು ಅವಮಾನಗಳನ್ನು ಅನುಭವಿಸಿ ಸಮಾನತೆಯನ್ನು ಸಾರುವ ಉದ್ದೇಶದಿಂದ ದಿನಾಂಕ 14/ 10/ 1956 ರಂದು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅವರ ಸಾವಿರಾರು ಅನುಯಾಯಿಗಳ ಜೊತೆಗೂಡಿ ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕಾರ ಮಾಡಿದ ಈ ಪುಣ್ಯಭೂಮಿಯ ಯಾತ್ರೆಯ ಹೆಸರಿನಲ್ಲಿ ಇಂದಿನ ಕೆಲವು ದಲಿತ ಮುಖಂಡರುಗಳು ಮೌಡ್ಯತೆ ಬಿತ್ತುತ್ತಿರುವ ಕೆಲವು ಮಂದಿರಗಳಿಗೆ ಹೋಗುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ ಇದೊಂದು ನೋವಿನ ವಿಷಯವಾದರೆ ಪ್ರತಿ ವರ್ಷವೂ ದೀಕ್ಷಾಭೂಮಿಗೆ ಹೊರಡುವ ತಿಂಗಳು ಬಂತೆಂದರೆ ಅದೆಷ್ಟೋ ಸರ್ಕಾರಿ ಅಧಿಕಾರಿಗಳಿಗೆ ನಡುಕ ಪ್ರಾರಂಭವಾದ ಮಾತುಗಳು ಸಹ ಕೇಳಿ ಬರುತ್ತಿವೆ
ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ಹಿಡಿದು ಕೆಲವು ಇಲಾಖೆಯ ಸರ್ಕಾರಿ ಅಧಿಕಾರಿಗಳಿಗೆ ಕೆಲವು ದಲಿತ ಮುಖಂಡರ ವರ್ತನೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿರುವುದು ನಿಜಕ್ಕೂ ಶೋಚನಿಯವಾದ ವಿಚಾರವಾಗಿದೆ ತಮಗೆ ಆದ ನೋವನ್ನು ಹೇಳಿಕೊಳ್ಳಲಾರದೆ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತೇವೆ ಒಂದು ವೇಳೆ ನಾವು ನಮ್ಮ ನೋವನ್ನು ಹೇಳಿಕೊಂಡರೆ ನಮಗೆ ದಲಿತ ವಿರೋಧಿ ಎಂಬ ಪಟ್ಟ ಕಟ್ಟುವ ಮೂಲಕ ನಮ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸುವಂತಹ ಕೆಲಸವಾಗುತ್ತಿದೆ ನಿಜಕ್ಕೂ ನಮ್ಮ ಪರಿಸ್ಥಿತಿ ಬಿಸಿ ತುಪ್ಪವನ್ನು ನುಂಗುವ ಹಾಗಿಲ್ಲ ಇತ್ತ ಉಗುಳುವ ಹಾಗಿಲ್ಲ ಎಂಬ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಹೆಸರು ಹೇಳಲು ಇಷ್ಟಪಡದ ಅಧಿಕಾರಿಗಳ ನೋವಿನ ಮಾತುಗಳಾಗಿ ಕೇಳಿ ಬರುತ್ತಿದ್ದು
ರಾಜ್ಯದಲ್ಲಿ ಹಾಯಾ ಜಿಲ್ಲೆಗಳಿಂದಲೇ ದೀಕ್ಷಾಭೂಮಿಗೆ ಹೋಗಿ ಬರಲು ತಗಲುವ ಪ್ರಯಾಣದ ವೆಚ್ಚವನ್ನು ಮಾತ್ರ ಸರ್ಕಾರದಿಂದ ಭರಿಸಲಾಗುವುದು ವಸತಿ ಮತ್ತು ಭೋಜನದ ವ್ಯವಸ್ಥೆಯನ್ನು ಯಾತ್ರಾರ್ಥಿಗಳೇ ಬರಿಸತಕ್ಕದ್ದು ಎಂಬ ಸರ್ಕಾರದ ಆದೇಶವಿದ್ದರೂ ಸಹ ಕೆಲವು ದಲಿತ ಮುಖಂಡರ ಬೇಡಿಕೆಗಳ ಒತ್ತಡವನ್ನು ಸಹಿಸಲು ಸಾಧ್ಯವಾಗದೆ ದೀಕ್ಷಾಭೂಮಿ ಯಾತ್ರೆಗೆ ಹೊರಟ ಯಾತ್ರಿಗಳ ಯೋಗಕ್ಷೇಮ ವಿಚಾರಿಸಲೆಂದು ಜೊತೆಗಿದ್ದ ಅಧಿಕಾರಿಗಳು ಮಾರ್ಗ ಮಧ್ಯದಲ್ಲಿ ಬಸ್ಸಿನಿಂದ ಹಿಳಿದು ಹೋದ ನಿದರ್ಶನಗಳು ಬೆಳಕಿಗೆ ಬಂದಿದ್ದು ಇದರಿಂದ ತಿಳಿಯುತ್ತದೆ ನಾವುಗಳು ದಲಿತ ಸಂಘಟನೆಯ ಹೆಸರಿಗೆ ಹಾಗೂ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ದೀಕ್ಷಾಭೂಮಿಯ ಹೆಸರಿನಲ್ಲಿ ಅವರಿಗೆ ಅಗೌರವ ತೋರುತ್ತಿದ್ದೇವೆ ಎಂಬುದನ್ನು ನಾವು ತಿಳಿಯಬೇಕಾಗಿದೆ.
ಅದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ನಾಗಪುರದ ದೀಕ್ಷ ಭೂಮಿ ಯಾತ್ರೆಗೆ ಪ್ರಯಾಣಿಸಲು ಸರ್ಕಾರದಿಂದ ಆಯೋಜನೆ ಮಾಡಿದಂತಹ ಬಸ್ಸುಗಳ ಚಾಲಕರಿಗೆ ಕೆಲವು ದಲಿತ ಮುಖಂಡರು ನಶೆಯ ಮತ್ತಿನಲ್ಲಿ ಅವರನ್ನು ಬಹಳ ತುಚ್ಚವಾಗಿ ಮಾತನಾಡಿರುವುದಕ್ಕೆ ಸರ್ಕಾರ ಇಂತಹ ಉತ್ತಮ ಯೋಜನೆಗಳ ಸದುಪಯೋಗವನ್ನು ನಿಜವಾದ ಅಂಬೇಡ್ಕರ್ ಅನುಯಾಯಿಗಳನ್ನು ಆಯ್ಕೆ ಮಾಡಿ ಕಳಿಸಬೇಕೆ ವಿನಹ ದೀಕ್ಷಾ ಭೂಮಿ ಯಾತ್ರೆಯ ನೆಪದಲ್ಲಿ ಮೋಜು-ಮಸ್ತಿಯಲ್ಲಿ ತೇಲಾಡುವ ಮುಖಂಡರನ್ನಲ್ಲಾ ಎಂಬ ಬೇಸರದ ಮಾತುಗಳು ಸಹ ಬಸ್ಸಿನ ಚಾಲಕರಿಂದ ಕೇಳಿ ಬರುತ್ತಿವೆ.
ಸರ್ಕಾರ ದೀಕ್ಷಾ ಭೂಮಿಯ ಯಾತ್ರೆಯನ್ನು ಒಳ್ಳೆಯ ಉದ್ದೇಶಕ್ಕೆ ಮಾಡಿದ್ದರು ಸಹ ಆ ಯಾತ್ರೆಯ ಹೆಸರು ಇತ್ತೀಚಿನ ದಿನಗಳಲ್ಲಿ ದುರುಪಯೋಗವಾಗುತ್ತಿದೆ ಎಂಬುದು ಬುದ್ಧಿಜೀವಿಗಳ ಮಾತಾಗಿದೆ.
ಇದೆಲ್ಲವನ್ನು ಪರಿಗಣಿಸಿ ಸರ್ಕಾರ ಮುಂದಿನ ದಿನಗಳಲ್ಲಿ ದೀಕ್ಷಾಭೂಮಿಗೆ ಹೋಗುವಂತಹ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಆಯ್ಕೆಯಾದ ಯಾತ್ರಿಗಳ ಪ್ರಯಾಣಕ್ಕೆ ತಗಲುವ ವೆಚ್ಚವನ್ನು ಅವರ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವ ಮೂಲಕ ಈ ದೀಕ್ಷಾ ಭೂಮಿ ಯಾತ್ರೆಯ ಮಹತ್ವ ಉಳಿಯುವಂತೆ ಮಾಡಬೇಕೆಂಬುದು ಪ್ರಜ್ಞಾವಂತ ಹಿರಿಯ ಹೋರಾಟಗಾರರ ಮನದಾಳದ ಮಾತಾಗಿದೆ.