ಶ್ರೀ ಸಂಕಷ್ಟಹರ ಗಣಪತಿ ವಕೀಲರ ಕಲಾ ಬಳಗದ ವಕೀಲ ಕಲಾವಿದರಿಂದ ನಾಟಕ ಪ್ರದರ್ಶನ

ಕಲ್ಪತರ ನಾಡು ಎಂದರೆ ತುಮಕೂರು ತುಮಕೂರಿಗೆ ಮತ್ತೊಂದು ಹೆಸರೇ ರಂಗಭೂಮಿಯ ತವರೂರು ಡಾಕ್ಟರ್ ಗುಬ್ಬಿ ವೀರಣ್ಣನವರು ಜನಿಸಿದ ಈ ನಾಡಲ್ಲಿ ಪೌರಾಣಿಕ ನಾಟಕವೆಂದರೆ ಕಲಾವಿದರಿಗೆ ಕಲಾ ಪ್ರೋತ್ಸಾಹಕರಿಗೆ ಬಹಳ ಅಚ್ಚುಮೆಚ್ಚು ಇಂತಹ ರಂಗಭೂಮಿಯ ಇತಿಹಾಸವುಳ್ಳ ತುಮಕೂರಿನಲ್ಲಿ ತುಮಕೂರು ಜಿಲ್ಲಾ ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಸಂಕಷ್ಟಹರ ಗಣಪತಿ ವಕೀಲರ ಕಲಾ ಬಳಗದ ವಕೀಲ ಕಲಾವಿದರಿಂದ ತುಮಕೂರಿನ ಹೆಸರಾಂತ ಶ್ರೀ ಬಸವೇಶ್ವರ ಡ್ರಾಮಾ ಸೀನರಿಯ ಭವ್ಯರಂಗ ಸಜ್ಜಿಕೆಯಲ್ಲಿ ಕಲಾ ಹೊಂಗಿರಣ ಟಿ ಎಚ್ ಸುದೀಪ್ ರವರ ಸಂಗೀತ ನಿರ್ದೇಶನದಲ್ಲಿ ದಿನಾಂಕ 8/9/2024 ರ ಭಾನುವಾರದಂದು 10:30ಕ್ಕೆ ತುಮಕೂರು ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕುರುಕ್ಷೇತ್ರ ಎಂಬ ಸುಂದರ ಪೌರಾಣಿಕ ನಾಟಕವನ್ನು ಪ್ರದರ್ಶನ ಮಾಡುತ್ತಿದ್ದು ನಾಡಿನ ಸಮಸ್ತ ಕಲಾವಿದರು ಕಲಾ ಪ್ರೋತ್ಸಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕವನ್ನು ವೀಕ್ಷಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಶ್ರೀ ಸಂಕಷ್ಟಹರ ಗಣಪತಿ ವಕೀಲರ ಕಲಾ ಬಳಗದ ಸರ್ವ ಸದಸ್ಯರು ಕಲಾ ಬಂಧುಗಳಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *