ತುಮಕೂರು: ಹಸಿರು ಕ್ರಾಂತಿಯ ಹರಿಕಾರ, ರಕ್ಷಣಾ ಕ್ಷೇತ್ರಕ್ಕೆ ತನ್ನದೇ ಆದ ನಿಲುವುಗಳನ್ನು ಕೊಟ್ಟ ಮಾಜಿ ಉಪ ಪ್ರಧಾನಿ ಡಾಕ್ಟರ್ ಬಾಬು ಜಗಜೀವನ್ ರಾಮ್ ಅವರ ಹೆಸರಿನಲ್ಲಿ ಬೆಂಗಳೂರು ಹೊರ ವರ್ತಲ ರಸ್ತೆಯಲ್ಲಿರುವ ಮಾಗಡಿ ರಸ್ತೆಯ ಸುಗ್ಗನಹಳ್ಳಿ ಸರ್ಕಲ್ ನಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದ ಬಳಿ ಸಂಶೋಧನ ಕೇಂದ್ರ ಉದ್ಘಾಟನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ವಿವಿಧ ದಲಿತಪರ ಸಂಘಟನೆಗಳ ಮುಖಂಡರುಗಳು ಉದ್ಘಾಟನಾ ಸಮಾರಂಭಕ್ಕೆ ತೆರಳಿದ ಹಿನ್ನೆಲೆಯಲ್ಲಿ ನಗರದ ಎಂ ಜಿ ರಸ್ತೆಯ ಅಂಬೇಡ್ಕರ್ ಭವನದ ಬಳಿ ಹಸಿರು ನಿಶಾನೆ ತೋರಲಾಯಿತು.
ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಎಡಿಎ ದಿನೇಶ್ ಅವರು ಸಂಶೋಧನಾ ಕೇಂದ್ರ ಹಾಗೂ ಭವನದ ಉದ್ಘಾಟನಾ ಕಾರ್ಯಕ್ರಮಕ್ಕೆ ಹೊರಟ ದಲಿತ ಮುಖಂಡರಿಗೆ ಶುಭ ಕೋರಿ ಮಾತನಾಡಿ ಅನೇಕ ದಿನಗಳಿಂದ ನೆನಗುದಿಗೆ ಬಿದಿದ್ದ ಬಾಬು ಜಗಜೀವನ್ ರಾಂ ಅವರ ಸಂಶೋಧನಾ ಕೇಂದ್ರ ಹಾಗೂ ಭವನ ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸದ ವಿಷಯವಾಗಿದ್ದು ಇಂತಹ ಮಹೋನ್ನತವಾದ ಕಾರ್ಯಕ್ರಮಕ್ಕೆ ತೆರಳುತ್ತಿರುವುದು ದಲಿತ ಮುಖಂಡರಿಗೆ ಅತೀವವಾದ ಖುಷಿಯನ್ನ ಉಂಟು ಮಾಡಿದೆ ಇದಕ್ಕೆ ಇಲಾಖೆಯು ಕೂಡಾ ಸಹಕರಿಸಿ ಮುಖಂಡರನ್ನು ಪದಾಧಿಕಾರಿಗಳನ್ನ ಕರೆದೊಯ್ಯಲಾಗುತ್ತಿದೆ ಎಂದರು.
ಇದೇ ವೇಳೆ ಎಂಜಿ ರಸ್ತೆಯ ಸರ್ಕಾರಿ ಪಿಯು ಹಾಸ್ಟೆಲ್ ನ ವಾರ್ಡನ್ ಶಿವಪ್ಪ ಅವರು ಮುಖಂಡರನ್ನ ಬೆಂಗಳೂರಿಗೆ ಕರೆದ್ಯೂದರು.
ಈ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ಟಿ.ಸಿ.ರಾಮಯ್ಯ, ಮುಖಂಡರುಗಳಾದ ಜೆಸಿಬಿ ವೆಂಕಟೇಶ್, ಬಂಡೆಕುಮಾರ್, ಹಾಲನೂರು ನರಸಿಂಹರಾಜು, ನಾಗರಾಜು, ಆಟೋ ಶಿವರಾಜು, ಮದಕರಿ ರಂಗಣ್ಣ, ಸಿದ್ದರಾಜು, ನಾಗ್ಗೇಶ್ , ರಾಮಮೂರ್ತಿ,ರಂಗಸ್ವಾಮಿ, ನರಸಿಂಹಮೂರ್ತಿ, ಸಂತೋಷ್, ಜಯಪುರ ಮಂಜುನಾಥ್, ಮಳೆಕಲ್ಲಹಳ್ಳಿ ಯೋಗೀಶ್, ನೇಗಲಾಲ ಸಿದ್ದೇಶ್, ರವಿ ಚಿಂಪುಗಾನಹಳ್ಳಿ ಸೇರಿದಂತೆ ಇತರ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.