ಪೊಲೀಸರ ಹತ್ಯೆಯ ನಂತರ ತಲೆ ಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

 ಪಾವಗಡ ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರನ್ನು ಹತ್ಯೆಗೈದಿದ್ದ ಮಾಜಿ  ನಕ್ಸಲೈಟ್  ವ್ಯಕ್ತಿಯನ್ನು   ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

 

 

2005ರ ಫೆಬ್ರವರಿ 10ರಂದು ಪಾವಗಡ ತಾಲ್ಲೂಕು ತಿರುಮಣಿ ಪೊಲೀಸ್ ಠಾಣೆಯ ವ್ಯಾಪ್ತಿಯ ವೆಂಕಟಮ್ಮನಹಳ್ಳಿಯ ಶಾಲೆಯಲ್ಲಿ ಭದ್ರತೆಗೆ ನೇಮಕವಾಗಿದ್ದ 9ಜನ ಪೊಲೀಸರನ್ನು  ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ ಆಂಧ್ರಪ್ರದೇಶದ ಮಾಜಿ ನಕ್ಸಲ್ ಬಂದೆಲ ಬಾಯನ್ನನ ಮಗನಾದ ಚಂದ್ರ ಮುತ್ಯಾಲು ಅಲಿಯಾಸ್ ಬಂದೆಲ ಮುತ್ಯಾಲುನನ್ನು ಪಾವಗಡ ಗ್ರಾಮಾಂತರ ವೃತ್ತದ ಸಿ ಗಿರೀಶ್, ಎಎಸ್ಐ ಗೋವಿಂದರಾಜು ಮತ್ತು ಸಿಬ್ಬಂದಿಗಳಾದ ಧರ್ಮಪಾಲನಾಯ್ಕ, ಪುಂಡಲೀಕ ಲಮಾಣಿ ಆರೋಪಿಯನ್ನು ಪತ್ತೆ ಮಾಡಿ ದಸ್ತೆಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶೋಕ.ಕೆ.ವಿ.ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೊಲೀಸರ ಹತ್ಯೆಯ ನಂತರ ಪೊಲೀಸ್ ಇಲಾಖೆಗೆ ಸೇರಿದ ಬಂದೂಕು, ಮದ್ದು ಗುಂಡುಗಳನ್ನು ದೋಚಿಕೊಂಡು ಪರಾರಿಯಾಗಿದ್ದರು, ಮಾಜಿ ನಕ್ಸಲೈಟ್ ಚಂದ್ರು ಮುತ್ಯಾಲ ಆಂಧ್ರಪ್ರದೇಶದ ಆನಂತಪುರ ಜಿಲ್ಲೆಯ ಸಿಂಗಲಮಲ್ಲ ತಾಲ್ಲೂಕಿನ ಗಾರಲದಿನ್ನೆ ಮಂಡಲದ ಕೇಶವಪುರಂ ಗ್ರಾಮದವನಾಗಿದ್ದು, ಪೊಲೀಸರ ಹತ್ಯೆಯ ನಂತರ ತಲೆ ಮರೆಸಿಕೊಂಡು ಬೆಂಗಳೂರಿನ ಬಿಬಿಎಂಪಿ ಲಾರಿಯಲ್ಲಿ ಕೂಲಿಕೆಲಸ ಮಾಡುತ್ತಿದ್ದನ್ನು ಪತ್ತೆ ಹಚ್ಚಿ ಹೆಚ್ಚುವರಿ ಪೋಲೀಸ್ ಅಧೀಕ್ಷಕರಾದ ಮರಿಯಪ್ಪ, ಅಬ್ದುಲ್ ಖಾದರ್ ರವರುಗಳ ಮಾರ್ಗದರ್ಶನ ಮತ್ತು ಮಧುಗಿರಿ ಪೋಲೀಸ್ ಉಪಾಧೀಕ್ಷಕರಾದ ರಾಮಚಂದ್ರಪ್ಪ ರವರ ನೇತೃತ್ವದಲ್ಲಿ ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *