ತಿಪಟೂರು ನ್ಯೂಸ್
ತಿಪಟೂರು ನಗರದ ಗಾಯತ್ರಿನಗರ ಸರಕಾರಿ ಶಾಲಾ ಮಕ್ಕಳಿಗೆ ಹಳೇ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಶಾಲೆಯ ಪುಟ್ಟ ಪುಟ್ಟ ಮಕ್ಕಳಿಗೆ ಟಾಕ್ ಸೂಟ್, ಪೆನ್ನು ಮತ್ತು ಪೆನ್ಸಿಲ್ ವಿತರಿಸಿದರು.
ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ತಮ್ಮ ಬಾಲ್ಯದ ಜೀವನ ಹಾಗೂ ವಿದ್ಯಾರ್ಥಿ ಜೀವನವನ್ನು ನೆನೆದು ಶಾಲಾ ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವುದರ ಜೊತೆಗೆ ಸರಕಾರಿ ಶಾಲೆಯಲ್ಲಿ ಓದಿದಂತಹ ಮಕ್ಕಳು ಉನ್ನತ ಅಧಿಕಾರಿಗಳಾಗಿದ್ದಾರೆ, ಸರಕಾರಿ ಶಾಲೆಯು ಸಕಲ ಸೌಲತ್ತುಗಳನ್ನು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರೆ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ತಿಳಿಸಿದರು
.ಇದೇ ಸಂದರ್ಭದಲ್ಲಿ, ಹಳೇ ವಿದ್ಯಾರ್ಥಿಗಳಾದ ಶಿವಪ್ರಸಾದ್,ಹರೀಶ್,ತೇಜಸ್, ಸದಾನಂದ, ವಿಶ್ವಾಸ್,ಮಂಜುನಾಥ್,ರಂಗನಾಥ್, ವಿಘ್ನೇಶ್ವರ,ಚಂದನ್,ಅಭಿಷೇಕ್ ಶಾಲಾ ಮುಖ್ಯ ಶಿಕ್ಷಕರದ ಶ್ರೀಮತಿ ಕುಸುಮ,ಸಹ ಶಿಕ್ಷಕರಾದ ಶ್ರೀಮತಿ ಶೈಲ,ಎಸ್‌ಡಿಎಂಸಿ ಅಧ್ಯಕ್ಷರಾದ ರಂಗನಾಥ್ ಮತ್ತು ಅಡುಗೆ ಸಿಬ್ಬಂದಿ ನಾಜೀಮಾ ಇದ್ದರು.
ವರದಿ: ಸೋಮನಾಥ್