ಪರವಾನಗಿ ಇಲ್ಲದೆ ಅನಧಿಕೃತ ಮಿಶ್ರಣ ರಸಗೊಬ್ಬರ ಉತ್ಪಾದನೆ, ದಾಸ್ತಾನು, ಮಾರಾಟ-ಜಪ್ತಿ:

ತುಮಕೂರು

ದಿನಾಂಕ : 26.06.2024ರಂದು ಕರ್ನಾಟಕ ಆಗ್ರೋ ಕೆಮಿಕಲ್ಸ್, ಮಧುಗಿರಿ ರಸ್ತೆ, ತುಮಕೂರು ನಗರದ ರಸಗೊಬ್ಬರ ಉತ್ಪಾದನಾ ಘಟಕದಲ್ಲಿ ಇಲಾಖೆಯಿಂದ ಅನುಮತಿ ಪಡೆಯದೇ -ಪರವಾನಗಿ ಇಲ್ಲದೆ-ಅನಧಿಕೃತವಾಗಿ ಉತ್ಪಾದನೆ ಮಾಡಿ ದಾಸ್ತಾನು ಮಾಡಿದ್ದ 50 Kg., ತೂಕದ 220 bags(11 ಟನ್ ಅಂದಾಜು ಮೊತ್ತ 1.23 ಲಕ್ಷ) ಗಳ ಲಘು ಪೋಷಕಾಂಶ ಮಿಶ್ರಣ (ಕ್ಯಾಲ್ಷಿಯಂ-23%, ಮೆಗ್ನಿಷಿಯಂ-2%, ಗಂದಕ-5%) ಸಮೃದ್ಧಿ ರಸಗೊಬ್ಬರವನ್ನು ಮಹಜರ್ ಮೂಲಕ ಮಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿ ಇಲಾಖೆ ವಶಕ್ಕೆ ಪಡೆಯಲಾಗಿದೆ.

 

 

ಮಾದರಿಯನ್ನು ತೆಗೆದು ವಿಶ್ಲೇಷಣೆಗೆ ಕಳುಹಿಸಿಕೊಡಲಾಗಿದೆ.

ಸದರಿ ಘಟಕವನ್ನು ಹಿಂದಿನ ಪರಿಶೀಲನಾ ಭೇಟಿ ವೇಳೆ ತಪಾಸಣೆ ಮಾಡಿದಾಗ ಸದರಿ ಲಘು ಪೋಷಕಾಂಶ ಮಿಶ್ರಣ ರಸಗೊಬ್ಬರ ದಾಸ್ತಾನು ಕಂಡು ಬಂದಿದ್ದು, ಅದರ ದಾಖಲಾತಿಗಳಾದ ಉತ್ಪಾದನಾ ಪರವಾನಗಿ & ಮಾರಾಟ ಪರವಾನಗಿ, ದಾಸ್ತಾನು-ಮಾರಾಟ ವಹಿ, ಖರೀದಿ ಇನ್ ವಾಯ್ಸ್ ಗಳನ್ನು ಸಲ್ಲಿಸಲು ಮಾರಾಟ ತಡೆ ಆದೇಶ ಜಾರಿ ಮಾಡಲಾಗಿತ್ತು.

 

 

ಆದರೆ ಸದರಿ ಉತ್ಪಾದಕರು ಪೂರ್ಣ ದಾಖಲೆಗಳನ್ನು ಸಲ್ಲಿಸದೇ ಇರುವ ಕಾರಣ ಸದರಿ ಜಪ್ತಿ ಕಾರ್ಯವನ್ನು ಕೈಗೊಳ್ಳಲಾಯಿತು. ರಸಗೊಬ್ಬರ ನಿಯಂತ್ರಣ ಆದೇಶ 1985 & ಅಗತ್ಯ ವಸ್ತುಗಳ ಅಧಿನಿಯಮ 1955ರ ಉಲ್ಲಂಘನೆ ಸಂಬಂಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಜಪ್ತಿ ಕಾರ್ಯದ ನೇತೃತ್ವವನ್ನು ಡಾ|| ಅನೀಸ್ ಸಲ್ಮಾ ಕೆ., ಉಪ ಕೃಷಿ ನಿರ್ದೇಶಕರು(ಜಾಗೃತ ಕೋಶ), ಬೆಂಗಳೂರು ವಿಭಾಗ, ಕೃಷಿ ಇಲಾಖೆ ಸಚಿವಾಲಯ ವಿಭಾಗ, ಬೆಂಗಳೂರು ರವರು ವಹಿಸಿರುತ್ತಾರೆ.

 

 

ಶ್ರೀ.ರೇಣುಕಾ ಪ್ರಸನ್ನ, ಸಹಾಯಕ ಕೃಷಿ ನಿರ್ದೇಶಕರು(ಜಾಗೃತ ಕೋಶ), ಬೆಂಗಳೂರು ವಿಭಾಗ, ಶ್ರೀ.ಆಶ್ವತ್ಥನಾರಾಯಣ, ಸಹಾಯಕ ಕೃಷಿ ನಿರ್ದೇಶಕರು(ಜಾರಿದಳ-2), ತುಮಕೂರು ರವರು ಭಾಗವಹಿಸಿರುತ್ತಾರೆ. ಜಪ್ತಿ ಕಾರ್ಯವನ್ನು ಶ್ರೀ.ಪುಟ್ಟರಂಗಪ್ಪ ಸಹಾಯಕ ಕೃಷಿ ನಿರ್ದೇಶಕರು(ಜಾರಿದಳ-1), ತುಮಕೂರು ರವರು ಕೈಗೊಂಡಿರುತ್ತಾರೆ.

Leave a Reply

Your email address will not be published. Required fields are marked *