ಅರವಿಂದ ಆಯುರ್ವೇದ ಚಿಕಿತ್ಸಾಲಯದಲ್ಲಿ ಉಚಿತ ಆರೋಗ್ಯ ತಪಾಸಣೆ

ತಿಪಟೂರು. ಅರವಿಂದ ಆಯುರ್ವೇದ ಚಿಕಿತ್ಸಾಲಯದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಪರವಗೊಂಡನಹಳ್ಳಿ ಜಾನಕಿ ರಾಮ ಮಹಿಳಾ ಜ್ಞಾನ ವಿಕಾಸ ಕೇಂದ್ರದ 40 ಮಂದಿ ಮಹಿಳಾ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

 

 

ಬಿ.ಪಿ, ಶುಗರ್, ಹಾಗೂ ಆರೋಗ್ಯ ತಪಾಸಣೆ ಯಶಸ್ವಿಯಾಗಿ ನಡೆಸಲಾಯಿತು, ಈ ಸಂದರ್ಭದಲ್ಲಿ ಅರವಿಂದ ಆಯುರ್ವೇದದ ಅನುಭವಿ ವೈದ್ಯರ ತಂಡ ಭಾಗಿಯಾಗಿದ್ದರು. ಮಹಿಳೆಯರ ಆರೋಗ್ಯ ಸಂಬಂಧಿ ಕಾಯಿಲೆಗಳು ಹಾಗೂ ವೈದ್ಯಕೀಯ ಸಲಹೆ ಸೂಚನೆಗಳನ್ನು ಸಹ ನೀಡಲಾಗಿತ್ತು.

 

 

ಈ ಸಂದರ್ಭದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಖ್ಯಾತ ಆಯುರ್ವೇದ ತಜ್ಞರಾದ ಡಾ.ಪ್ರಶಾಂತ್ ರವರು ನೈಸರ್ಗಿಕ ಆಯುರ್ವೇದ ಚಿಕಿತ್ಸೆ ಮೂಲಕ ಸಂಪೂರ್ಣ ಸ್ವಾಸ್ಥ್ಯವನ್ನು ಪಡೆದುಕೊಳ್ಳಬಹುದು, ಮಹಿಳೆಯರಿಗೆ ಧೀರ್ಘ ಕಾಲದಿಂದಲೂ ಕಾಡುವ ಸಮಸ್ಯೆಗಳನ್ನು ಸಹ ಪರಿಣಾಮಕಾರಿಯಾಗಿ

ಆಪ್ತ ಸಮಾಲೋಚನೆಗಳು, ವೈಯಕ್ತಿಕ ಚಿಕಿತ್ಸಾ ವಿಧಾನಗಳ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ನುಡಿದರು.

 

 

 

ಹಾಗೂ ಅರವಿಂದ ಆಯುರ್ವೇದದಲ್ಲಿ ಇರುವಂತಹ ಶಾಸ್ತ್ರೀಯ ಆಯುರ್ವೇದ ಮಾದರಿಯ ಚಿಕಿತ್ಸಾ ವಿಧಾನಗಳು ಬಹಳ ಪರಿಣಾಮಕಾರಿಯಾಗಿರುತ್ತವೆ ಮುಂದಿನ ದಿನಗಳಲ್ಲಿ ಮತ್ತಷ್ಟು ಆರೋಗ್ಯ ಶಿಬಿರ ಗಳನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು

Leave a Reply

Your email address will not be published. Required fields are marked *

error: Content is protected !!