ಗುಬ್ಬಿ :
ತಾಲೂಕಿನ ಹೊಸಕೆರೆ ವಲಯದ ಅರೇ ಹಳ್ಳಿ ಕಾರ್ಯಕ್ಷೇತ್ರದ ಉಗಮ ಜ್ಞಾನವಿಕಾಸ ಕೇಂದ್ರದಲ್ಲಿ ಸ್ವ ಉದ್ಯೋಗ ಪ್ರೇರಣ ಶಿಬಿರವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು ಮಹಿಳೆಯರು ಸ್ವಾವಲಂಬಿ ಆಗಬೇಕೆಂದು ತಿಳಿಸಿದರು.
ತುಮಕೂರು ಜಿಲ್ಲೆಯ ನೀರು ಉಳಿಸಿ ಕಾರ್ಯಕ್ರಮದ ಮೇಲ್ವಿಚಾರಕ ಕೇಶವ ಮೂರ್ತಿ ಮಾತನಾಡಿ ಯೋಜನೆಯ ಕಾರ್ಯಕ್ರಮಗಳ ಪರಿಚಯ ಹಾಗೂ ನೀರು ಉಳಿಸಿ ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಿದರು.
ಅನಿತಾ ಮಾತನಾಡಿ ಸ್ವ ಉದ್ಯೋಗ ಯಾಕೆ ಮಾಡಬೇಕು, ಸ್ವ ಉದ್ಯೋಗದಿಂದ ಆಗುವ ಪ್ರಯೋಜನಗಳು, ಸ್ವ ಉದ್ಯೋಗಕ್ಕೆ ಹೇಗೆ ಸಬ್ಸಿಡಿ ಗಳು ಸಿಗುತ್ತದೆ ಮಾಹಿತಿಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಉಮೇಶ್, ಊರಿನ ಗಣ್ಯರಾದ ರೇಣುಕಪ್ಪ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ, ಸೇವಾ ಪ್ರತಿನಿಧಿ ಹಾಗೂ ಜಾನವಿಕಾಸ ಕೇಂದ್ರದ ಸದಸ್ಯರುಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.