ಎಸ್.ಎಸ್.ಎಲ್.ಸಿ. ಮರುಮೌಲ್ಯಮಾಪನ: ತಾಲೂಕಿಗೆ ಪ್ರಥಮ, ರಾಜ್ಯಕ್ಕೆ 8ನೇ ಸ್ಥಾನ ಪಡೆದ ಪ್ರಿಯಾ ಶಾಲೆಯ ಸಿಂಚನ*

ತುರುವೇಕೆರೆ: ಎಸ್.ಎಸ್.ಎಲ್ .‌ಸಿ ಪರೀಕ್ಷೆಯ ಫಲಿತಾಂಶದಲ್ಲಿ 607 ಅಂಕ ಗಳಿಸಿ ತಾಲೂಕಿಗೆ ತೃತೀಯ ಸ್ಥಾನ ಪಡೆದಿದ್ದ ಶಾಲೆಯ ವಿದ್ಯಾರ್ಥಿನಿ ಎಂ.ಬಿ.ಸಿಂಚನ ಮರು ಮೌಲ್ಯಮಾಪನದ ನಂತರ 617ಕ್ಕೆ ಅಂಕ ಗಳಿಕೆ‌ ಹೆಚ್ಚಿಸಿಕೊಂಡು ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 8 ನೇ ಸ್ಥಾನವನ್ನು ಪಡೆದಿರುತ್ತಾಳೆ ಎಂದು ಪ್ರಿಯಾ ಆಂಗ್ಲ ಶಾಲೆಯ ಅಧ್ಯಕ್ಷ ಎಂ.ಎನ್.ಚಂದ್ರೇಗೌಡ ತಿಳಿಸಿದರು.

 

 

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೆಲವು ದಿನಗಳ ಹಿಂದೆಯಷ್ಟೇ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಪ್ರಕಟವಾಗಿ ನಮ್ಮ ಶಾಲೆಯು ಶೇ.100 ಫಲಿತಾಂಶ ಪಡೆದಿದೆ. ಈ ಪೈಕಿ 607 ಅಂಕ ಪಡೆದಿದ್ದ ಎಂ.ಬಿ.ಸಿಂಚನ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಮರು ಮೌಲ್ಯಮಾಪನದ ನಂತರ ಸಿಂಚನಗೆ ಕನ್ನಡದಲ್ಲಿ 3, ಇಂಗ್ಲಿಷ್ ನಲ್ಲಿ 4 ಅಂಕ ಹೆಚ್ಚು ಬಂದಿದೆ.‌ ಒಟ್ಟಾರೆ ಸಿಂಚನಳ ಎಸ್.ಎಸ್.ಎಲ್.ಸಿ. ಅಂಕ 607 ರಿಂದ 614ಕ್ಕೆ ಏರಿಕೆಯಾಗಿದೆ. ಇದರಿಂದ ಪ್ರಸ್ತುತ ತಾಲೂಕಿಗೆ ತೃತೀಯ ಸ್ಥಾನದಲ್ಲಿದ್ದ ಸಿಂಚನ ಮರುಮೌಲ್ಯಮಾಪನದ ಫಲಿತಾಂಶದಿಂದ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 8 ನೇ ಸ್ಥಾನ ಪಡೆಯುವಂತಾಗಿದೆ.

 

 

 

ಶಾಲೆಯ ಇತಿಹಾಸವನ್ನು ಅವಲೋಕಿಸಿದರೆ 2006-07 ರಲ್ಲಿ ಎಸ್.ಎಸ್.ಎಲ್.ಸಿ. ಪ್ರಥಮ ವರ್ಷದ ಪರೀಕ್ಷೆ ಶಾಲೆಯಲ್ಲಿ ನಡೆಯಿತು. ಅಂದಿನಿಂದ ಇಂದಿನವರೆಗೆ ಸತತ 15 ನೇ ಬಾರಿ ಶಾಲೆಯು ಎಸ್.ಎಸ್.ಎಲ್.ಸಿ.ಯಲ್ಲಿ ಶೇ.100 ಫಲಿತಾಂಶ ಪಡೆಯುತ್ತಾ ಬಂದಿದೆ. 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶದಲ್ಲಿ‌ ನಮ್ಮ ಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದು ಸಾಧನೆಯಾಗಿದೆ.

 

 

ಒಟ್ಟಾರೆ ಶಾಲೆಯು ವಿದ್ಯಾರ್ಥಿಗಳ ಭವಿಷ್ಯವನ್ನು ಉನ್ನತ ರೀತಿಯಲ್ಲಿ ರೂಪಿಸುವಲ್ಲಿ ಶ್ರಮಿಸುತ್ತಿದೆ. ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 8 ನೇ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದ ಸಿಂಚನ ಅವರನ್ನು ಹಾಗೂ ಸತತ 15 ನೇ ವರ್ಷ ಎಸ್.ಎಸ್.ಎಲ್.ಸಿ. ಯಲ್ಲಿ ಶೇ.100 ಫಲಿತಾಂಶ ಬರಲು ಕಾರಣರಾದ ಶಾಲೆಯ ಶಿಕ್ಷಕ ವೃಂದವನ್ನು ಸಹ ಶಾಲೆಯ ಆಡಳಿತ ಮಂಡಳಿ ಅಭಿನಂದಿಸುತ್ತದೆ ಎಂದರು.

 

 

ಈ ಸಂದರ್ಭದಲ್ಲಿ ಕಾರ್ಯದರ್ಶಿ ಪುಷ್ಪಲತಾ ಚಂದ್ರೇಗೌಡ, ಸಹ ಕಾರ್ಯದರ್ಶಿ ಚೇತನ್ ಚಂದ್ರೇಗೌಡ ಉಪಸ್ಥಿತರಿದ್ದರು.

 

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

Leave a Reply

Your email address will not be published. Required fields are marked *

error: Content is protected !!