ಕಿಡಿಗೇಡಿಗಳಿಂದ ವಿ. ಸೋಮಣ್ಣನವರಿಗೆ ಹಾಗೂ ಹಲವು ನಾಯಕರಿಗೆ ಅವಮಾನ.

ಕೊರಟಗೆರೆ ತಾಲೂಕು ಕೋಳಾಲ ಹೋಬಳಿಯ ನೀಲಗೊಂಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಕೇನಹಳ್ಳಿ ಗ್ರಾಮದಲ್ಲಿ ಬಿಜೆಪಿ ನಾಯಕರಿಗೆ ಅವಮಾನ.

 

 

ಕಿಡಿಗೇಡಿಗಳಿಗೆ ತುಮಕೂರು ಜಿಲ್ಲೆಯ ನೂತನ ಸಂಸದರಾದ ವಿ ಸೋಮಣ್ಣನವರಿಗೆ ಕೇಂದ್ರ  ಸಚಿವ ಸ್ಥಾನ ಲಭಿಸಿರುವುದನ್ನು  ರಹಿಸಲಾರದೆ ವಿ ಸೋಮಣ್ಣನವರು ಕೇಂದ್ರ ಸಚಿವ ಸ್ಥಾನದ ಪ್ರಮಾಣ ವಚನ ಸ್ವೀಕಾರದ ದಿನದಂದೆ ಸಂಕೇನಹಳ್ಳಿ ಜಾತ್ರಾ ಮಹೋತ್ಸವಕ್ಕೆ ಶುಭ ಕೋರಲು ಹಾಕಿದ್ದ ಬಿಜೆಪಿ ನಾಯಕರ   ಫ್ಲೆಕ್ಸ್ ಗಳನ್ನು ಗುಂಪು ಕಟ್ಟಿಕೊಂಡು ಹರಿದು ಹಾಕಿದ್ದಾರೆ.

 

 

ವಿಶೇಷವಾಗಿ ಸಂಕೇನಹಳ್ಳಿ ಗ್ರಾಮದಲ್ಲಿ ಆರು ದಿನಗಳ ಜಾತ್ರಾ ಮಹೋತ್ಸವಕ್ಕೆ ಶುಭ ಕೋರಲೆಂದು ಹಾಕಿರುವ ಫ್ಲೆಕ್ಸ್ ಗಳನ್ನು ರಾತ್ರಿಯ ಸಮಯದಲ್ಲಿ ಹರಿದು ಹಾಕಿದ್ದು ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಹಲವಾರು ಮುಖಂಡರಿಗೆ ಬಾರಿ ಮುಖಭಂಗವಾಗಿದೆ ಎಂದು ಸಂಕೇನಹಳ್ಳಿ ಗ್ರಾಮಸ್ಥರು ಮಾತನಾಡುತ್ತಿರುವುದು ಬೆಳಕಿಗೆ ಬಂದಿದೆ.

 

Leave a Reply

Your email address will not be published. Required fields are marked *