ಜೂನ್ 10 ರಿಂದ 13ರವರೆಗೆ ಶ್ರೀದುರ್ಗಮ್ಮ ಮತ್ತು ಶ್ರೀಪೂಜಮ್ಮ ದೇವರುಗಳ ಜಾತ್ರಾ ಮಹೋತ್ಸವ

ತುಮಕೂರು ನಗರದ ಪುರಾತನ ಇತಿಹಾಸ ಪ್ರಸಿದ್ದ ಎನ್,ಆರ್ ಕಾಲೋನಿಯ ಕುಲದೇವತೆ ಬಳ್ಳಾರಿ ಶ್ರೀ ದುರ್ಗಮ್ಮ, ಪೂಜಮ್ಮ ಮತ್ತು ದಾಳಮ್ಮ ಜಾತ್ರಾ ಮಹೋತ್ಸವವನ್ನು ಜೂನ್ 10 ರಿಂದ 13 ರವರೆಗೆ ಶ್ರೀ ದುರ್ಗಮ್ಮ ದೇವಸ್ಥಾನ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಸಂಘ ಮತ್ತು ಕುಲವಾಡಿಗಳ ನೇತೃತ್ವದಲ್ಲಿ ಜಾತ್ರೆಯನ್ನು ಆಯೋಜಿಸಲಾಗಿದೆ.

 

 

 

 

ಜೂನ್ 10ರ ಸೋಮವಾರ ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲೀವಾಹನ ಶಕ ವರ್ಷಂಗಳು 1945ನೇ ಶ್ರೀ ಶೋಭಕೃತುನಾಮ ಸಂವತ್ಸರದ ಜ್ಯೇಷ್ಠ ಮಾಸ ರಾತ್ರಿ 8 ಗಂಟೆಗೆ ತುಮಕೂರು ಅಮಾನಿಕೆರೆ ಹತ್ತಿರ ಗಂಗಾ ಪೂಜೆ ಮತ್ತು ಪುಣ್ಯಃ ಪೂಜೆ ಮುಗಿಸಿ ಎನ್.ಆರ್ ಕಾಲೋನಿಗೆ ಹಿಂತಿರುಗಿ ಕುಲವಾಡಿ ಮನೆತನಗಳಿಂದ ಸಾಂಪ್ರದಾಯಿಕ ಪೂಜೆ ಶಾಂತಿ ಹವನಗಳನ್ನು ನೆರವೇರಿಸಲಾಗುವುದು.

 

 

 

ಜೂನ್ 11 ರ ಮಂಗಳವಾರ ಎನ್.ಆರ್ ಕಾಲೋನಿಯಿಂದ ಶ್ರೀ ದುರ್ಗಾಂಬ, ಶ್ರೀ ಪೂಜಮ್ಮ, ಶ್ರೀ ದಾಳಮ್ಮ ದೇವರುಗಳನ್ನು ಅಂಬೇಡ್ಕರ್ ನಗರಕ್ಕೆ ಕರೆದುಕೊಂಡು ಹೋಗಿ ಪೂಜಾ ಕಾರ್ಯಕ್ರಮಗಳನ್ನು ಮುಗಿಸಿ, ನಂತರ ಅದೇ ದಿವಸ ನಿರ್ವಾಣಿ ಲೇಔಟ್ ನಲ್ಲಿ ವಿಶೇಷ ಪೂಜೆ, ಆರತಿಯೊಂದಿಗೆ ಮೆರವಣಿಗೆ ಮೂಲಕ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಮತ್ತು ಸಂಜೆ ದುರ್ಗಾಂಬ ದೇವಸ್ಥಾನದ ಬಳಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

 

 

 

ಜೂನ್ 12 ಬುಧವಾರ ಮಧ್ಯಾಹ್ನ 3 ಗಂಟೆಗೆ ಕೋತಿತೋಪಿನ ಬಾಬು ಜಗಜೀವನರಾಂ ಸರ್ಕಲ್‍ನಿಂದ ಶ್ರೀ ದುರ್ಗಾಂಬ, ಶ್ರೀ ಪೂಜಮ್ಮ, ಶ್ರೀ ದಾಳಮ್ಮ, ಶ್ರೀ ಯಲ್ಲಮ್ಮ ದೇವರುಗಳ ಉತ್ಸವವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ತಂಡಗಳೊಂದಿಗೆ ಎನ್,ಆರ್ ಕಾಲೋನಿಯಿಂದ ಹೊರಟು, ಯಜಮಾನರುಗಳು ಮತ್ತು ಮುಖಂಡರುಗಳ ನೇತೃತ್ವದಲ್ಲಿ ಉತ್ಸವಕ್ಕೆ ಚಾಲನೆ ನೀಡಿ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹೊರಪೇಟೆ ವೃತ್ತ, ಬಾರ್‍ಲೈನ್ ರಸ್ತೆ, ಶ್ರೀರಾಮದೇವರ ರಸ್ತೆ, ಬಿ.ಹೆಚ್, ರಸ್ತೆ ಎಂ,ಜಿ,ರಸ್ತೆ ವಿವೇಕಾನಂದ ರಸ್ತೆ, ಅಶೋಕ ರಸ್ತೆಯಿಂದ ಕೋಟೆ ಶ್ರೀ ಆಂಜನೇಯ್ಯಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿರುವ ಶ್ರೀ ದುರ್ಗಾಂಬ ಮೂಲ ದೇವಸ್ಥಾನದಲ್ಲಿ ವಿಶೇಷ ಪೂಜೆ ಮುಗಿಸಿ ಎನ್.ಆರ್ ಕಾಲೋನಿಗೆ ವಾಪಸ್ ಬರುವುದು.

 

 

 

 

ಜೂನ್ 13 ರ ಗುರುವಾರ ಎನ್.ಆರ್ ಕಾಲೋನಿಯಲ್ಲಿ ಮೆರವಣಿಗೆ ಮತ್ತು ಆರತಿ ಸೇವೆ ಮೂಲಕ ಪೂಜೆ ಮಡಲಕ್ಕಿ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ. ಭಕ್ತಮಹಾಶಯರು ಸಕಾಲಕ್ಕೆ ಸರಿಯಾಗಿ ಶ್ರೀ ದುರ್ಗಾಂಬ, ಶ್ರೀ ಪೂಜಮ್ಮ, ಶ್ರೀ ದಾಳಮ್ಮ, ಶ್ರೀ ಯಲ್ಲಮ್ಮ ದೇವರುಗಳ ಕೃಪೆಗೆ ಪಾತ್ರರಾಗಬೇಕೆಂದು
ಶ್ರೀ ದುರ್ಗಮ್ಮ ದೇವಸ್ಥಾನ ಜೀರ್ಣೋದ್ದಾರ ಮತ್ತು ಎನ್.ಆರ್.ಕಾಲೋನಿ ಅಭಿವೃದ್ಧಿ ಟ್ರಸ್ಟ್ ಮತ್ತು ಜಾತ್ರ ಮಹೋತ್ಸವ ಸಮಿತಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *