ಅಧಿಕಾರಿಗಳ ನಿರ್ಲಕ್ಷದಿಂದ ತುಂಡಾಗಿ ನೆಲಕ್ಕೆ ಬಿದ್ದ ವಿದ್ಯುತ್ ಕಂಬಗಳು 

ತಿಪಟೂರು ಸುದ್ದಿ:

ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಬಿಳಿಗೆರೆ ಗ್ರಾಮದಲ್ಲಿ, ಎಲ್ ಟಿ ಎ ಬಿ ಕೇಬಲ್ ವರ್ಕ್ ನಡೆಯುವಾಗ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವ ಘಟನೆ ನಡೆದಿದೆ.

 

ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೆ, ಅವೈಜ್ಞಾನಿಕ ಕಾಮಗಾರಿಯನ್ನು ಏಕಾಏಕಿ ಗುತ್ತಿಗೆದಾರರು ಮಧ್ಯಾಹ್ನ 1:00 ಸುಮಾರಿನಲ್ಲಿ ಅಲ್ಯೂಮಿನಿಯಂ ಕೇಬಲ್ ಬದಲು ಎಲ್ ಟಿ ಎ ಬಿ ಕೇಬಲ್ ಅಳವಡಿಸುವ, ಕಾಮಗಾರಿ ನಡೆಸುವ ಸಂದರ್ಭದಲ್ಲಿ ಎರಡು ವಿದ್ಯುತ್ ಕಂಬಗಳು ಮುರಿದು ಧರೆಗೂರಳಿವೆ.

 

 

ಅದೃಷ್ಟವಶ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಇಂತಹ ಕಾಮಗಾರಿಗಳನ್ನು ನಡೆಸುವಾಗ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಹಾಜರಿಲ್ಲದನ್ನು ಖಂಡಿಸಿ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

 

 

ವರದಿ: ಸೋಮನಾಥ್

Leave a Reply

Your email address will not be published. Required fields are marked *