ಪರಿಸರ ದಿನ ವೆಂದರೆ ಗಿಡ ನೆಡುವುದು ಮಾತ್ರವಲ್ಲ, ಪರಿಸರದೊಂದಿಗೆ ಪ್ರೀತಿಯಿಂದ ಬದುಕುವುದು ” – ಕೃಷ್ಣಮೂರ್ತಿ ಬಿಳಿಗೆರೆ*

ಪರಿಸರ ದಿನಾಚರಣೆ ಆಚರಿಸುವುದೆಂದರೆ ಗಿಡ ನೆಡುವುದು ಮಾತ್ರವಲ್ಲ ನಮ್ಮ ಸುತ್ತ ಮುತ್ತಲಿನ ಪರಿಸರದೊಂದಿಗೆ ಪ್ರೀತಿಯಿಂದ ಬದುಕುವುದು , ಒಳ್ಳೆಯ ಆರೋಗ್ಯ ಪೂರ್ಣ ಆಹಾರ ಸೇವಿಸುವುದು, ಮಳೆ ನೀರನ್ನು ಹಿಡಿದು ಸಂಗ್ರಹಿಸಿ ಬಳಸುವುದು, ಪ್ರಕೃತಿಯೊಂದಿಗೆ ಬದುಕುವುದು ಎಂದು ಕವಿ , ಜೀವಪರ ಚಿಂತಕ ಕೃಷ್ಣಮೂರ್ತಿ ಬಿಳಿಗೆರೆ ತಿಳಿಸಿದರು.

 

 

ಅವರು ಗುಬ್ಬಿ ತಾಲ್ಲೂಕು ಕಾಡಶೆಟ್ಟಿಹಳ್ಳಿ ಗ್ರಾಮದ ಜ್ಞಾನಮಲ್ಲಿಕ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಪರಿಸರ ದಿನದ ಪ್ರಯುಕ್ತ ನಡೆದ ” “ಭೂಮಿಯೊಂದು ಮಹಾಬೀಜ”- ಕವಿ ಕೃಷ್ಣ ಮೂರ್ತಿ ಬಿಳಿಗೆರೆ ಯವರೊಂದಿಗೆ ಮಾತುಕಥೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

 

 

ತಾವು ರಚಿಸಿದ ಪರಿಸರ ಗೀತೆಗಳನ್ನು ಮಕ್ಕಳೊಂದಿಗೆ ಹಾಡುವ ಮೂಲಕ ಪರಿಸರದೊಂದಿಗೆ ಪ್ರೀತಿಯೊಂದಿಗೆ ಬದುಕುವ ಆಶಯಗಳನ್ನು ಮಕ್ಕಳಲ್ಲಿ ಬಿತ್ತುವ ಪ್ರಯತ್ನ ಮಾಡಿದರು. ಕಾಡಶೆಟ್ಟಿಹಳ್ಳಿ ಯ ಸರ್ಕಾರಿ ಶಾಲೆ ಒಂದು ಮಾದರಿ ಶಾಲೆಯಾಗಿದ್ದು ಇಲ್ಲಿನ ಶಿಕ್ಷಕರು ಮಾದರಿ ಶಿಕ್ಷಕರಾಗಿದ್ದಾರೆ ಎಂದು ತಿಳಿಸಿದರು.

 

 

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಗ್ರಾಮ ಪಂಚಾಯತಿ ಸದಸ್ಯ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡುತ್ತಾ, ಕೃಷ್ಣಮೂರ್ತಿ ಬಿಳಿಗೆರೆ ರವರ ಮಕ್ಕಳ ಹಾಡುಗಳನ್ನು ಶಾಲಾ ಪಠ್ಯದಲ್ಲಿ ಸೇರಿಸಬೇಕು. ಬಿಳಿಗೆರೆಯವರ ಬರವಣಿಗೆಗಳು ಮಕ್ಕಳಲ್ಲಿ ಪರಿಸರ ಪ್ರೀತಿಹುಟ್ಟುವಂತೆ ಮಾಡುತ್ತವೆ ಎಂದು ತಿಳಿಸಿದರು.

 

 

ವಿದ್ಯಾರ್ಥಿಗಳು ಪರಿಸರ ದಿನದ ಮಹತ್ವವನ್ನು ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಕು. ಕಮುದಾ ಕಾರ್ಯಕ್ರಮ ನಿರೂಪಿಸಿದರು. ಚಿರಂತ್ ಸ್ವಾಗತಿಸಿ ಸಂತೋಷ್ ವಂದಿಸಿದರು. ಕು.ಮೋಕ್ಷ ಅತಿಥಿಗಳ ಪರಿಚಯ ಮಾಡಿದರು.

Leave a Reply

Your email address will not be published. Required fields are marked *