ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ಲೇಸರ್ ಅಳವಡಿಕೆ ಅಗತ್ಯ ಎಂದು ತಿಳಿಸಿದ : ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ

ವಾಸನ್ ಐ ಕೇರ್‌ನ ತುಮಕೂರು ಶಾಖೆಯ 14 ನೇ ವರ್ಷದ ವಾರ್ಷಿಕೋತ್ಸವದ ಉದ್ಘಾಟನೆ ಮಾಡಿದ ಪರಮ ಪೋಜ್ಯ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ:

 

 

ತುಮಕೂರಿನ ವಾಸನ್ ಐ ಕೇರ್ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕಣ್ಣಿನ ಆಸ್ಪತ್ರೆಯಲ್ಲಿ ಸಮಗ್ರ ಕಣ್ಣಿನ ಆರೈಕೆ ಲಭ್ಯವಿದ್ದು, ತುಮಕೂರಿನ ಜನತೆ ಇದರ ಸದುಪಯೋಗವನ್ನು ಪಡೆಯಬೇಕೆಂದರು .

 

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ಲೇಸರ್ ಅಥವಾ PHACO ಶಸ್ತ್ರಚಿಕಿತ್ಸೆಯೇ ಹೆಚ್ಚು ಜನರ ಮನ್ನಣೆ ಪಡೆದಿರುವುದು. ಇಂತಹ ಸೌಲಭ್ಯವನ್ನು ರೋಗಿಗಳಿಗೆ ಒದಗಿಸುವುದು ಆಸ್ಪತ್ರೆಗಳ ಜವಾಬ್ದಾರಿಯಾಗಿರುತ್ತದೆ. ವಾಸನ್ ಐ ಕೇರ್ ಅತ್ಯಾಧುನಿಕ ಆಪರೇಷನ್ ಥಿಯೇಟರ್‌ನ್ನು ಶ್ರೀ ಸಿದ್ದಗಂಗಾ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಯವರ ಅಮೃತ ಹಸ್ತಗಳಿಂದ ಉದ್ಘಾಟಿಸಲಾಯಿತು.

ನಗರದ ಎಸ್.ಎಸ್.ಪುರಂದ ವಾಸನ್ ಐ ಕೇರ್ 14 ನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಮೇ.31ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಅವರು ಪ್ರತಿಯೊಬ್ಬರೂ ಕಾಲ ಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.

 

ಕಾರ್ಯಕ್ರಮದಲ್ಲಿ ವಾಸನ್ ಐ ಕೇರ್ ಆಸ್ಪತ್ರೆಯ ನುರಿತ ನೇತ್ರ ತಜ್ಞರಾದ ಡಾ.ಸ್ಮಿತಾರವರು ಮಾತನಾಡುತ್ತಾ ತುಮಕೂರಿನ ವಾಸನ್ ಐ ಕೇರ್ ಆಸ್ಪತ್ರೆಯಲ್ಲಿ ಅತಿ ಕಡಿಮೆ ಲೈನ್ಸ್ ಲಭ್ಯವಿದೆ. ಕಣ್ಣಿನ ಪರೀಕ್ಷೆ ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಕಣ್ಣಿನ ಪೊರೆಯಿಂದಾಗಿ ಯಾರು ಅಂಧರಾಗಬೇಕಾಗಿಲ್ಲ. ಗ್ಲೋಕೋಮಾದಿಂದ ಸುಮಾರು 40 ವರ್ಷ ಮೇಲ್ಟಟ್ಟುದವರಿಗೆ 6 ತಿಂಗಳೊಮ್ಮೆ ಆಸ್ಪತ್ರೆಗೆ ತಪಾಸಣೆಗೆ ಬರಬೇಕು. ಕ್ಯಾಟ್‌ರಾಕ್ಟ್ ಲೈಸರ್ ಟೆಕ್ನಾಲಜಿಯಿಂದ ಕಣ್ಣಿನ ಆರೋಗ್ಯಕ್ಕೆ ಸುಮಾರು 5 ರಿಂದ 15 ನಿಮಿಷದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಕಣ್ಣಿನ ಪೊರೆಯಿಂದ ಗ್ಲೋಕೋಮಾ ಡಯಾಬಿಟಿಕ್ ರೆಟಿನೋತ್ಪತ್ತಿಗಳಂತಹ ಕಣ್ಣಿನ ಸಮಸ್ಯೆಗಳ ಕುರಿತು ಮಾಹಿತಿಯನ್ನು ಹಂಚಿಕೊಂಡರು.
ರೋಗ ನಿರ್ಣಯ ಮತ್ತು ಶಸ್ತ್ರಚಿಕಿತ್ಸೆ ಎರಡಕ್ಕೂ ಅತ್ಯಾಧುನಿಕ ಆಧುನಿಕ ಸಾಧನಗಳಿವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಡಾ.ಸಂಧ್ಯಾರವರು ಮಾತನಾಡುತ್ತಾ ಹೊಸ ಕಣ್ಣಿನ ಆರೈಕೆ ಸೌಲಭ್ಯಗಳಾದ ಎ.ಆರ್.ಆಟೋ ರೆಫ್ರೆಕೋ ಮೀಟರ್, ಎನ್.ಸಿಟಿ-ನಾನ್ ಕ್ಯಾಟ್‌ರಾಕ್ಟ್ ಟೋನೋಮೀಟರ್, ಮಾಡುವ ಸೌಲಭ್ಯ ಕಲ್ಪಿಸವಾಗಿದೆ. Yas Lase ನಂತಹ ಇತ್ತೀಚಿನ ಡಯಾಗೋಸ್ಟಿಕ್ ಉಪಕರಣಗಳನ್ನು ನೇತ್ರ ಆರೈಕೆ ಆಸ್ಪತ್ರೆಯಲ್ಲಿ ಬಳಸಲಾಗುತ್ತದೆ. ಈ ಆಸ್ಪತ್ರೆಯೂ ವಿಶ್ವದರ್ಜೆಯ ಕಣ್ಣುಗಳ ಚಿಕಿತ್ಸೆಗೆ ತುಮಕೂರಿನ ವಾಸನ್ ಐ ಕೇರ್ ಜನರಿಗೆ ವರದಾನವಾಗಲಿದೆ ಎಂದು ಅರ್ಥಪೂರ್ಣವಾಗಿ ವಿವರಿಸಿದರು.

 

 

 

ಕಾರ್ಯಕ್ರಮದಲ್ಲಿ ಡಾ.ಕೌಸರ್‌ ರವರು ಮಾತನಾಡುತ್ತಾ ತುಮಕೂರಿನ ವಾಸನ್ ಐ ಕೇರ್ ನೇತ್ರ ವಿಜ್ಞಾನ ಈ ಶಾಖೆಯಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಿಮಾ ಕಂಪನಿಗಳಿಂದ ಸರ್ಕಾರಿ ಯೋಜನೆಗಳನ್ನು ಅನುಮೋದಿಸಿದರೆ. ಇದರ ಅಡಿಯಲ್ಲಿ ಎಲ್ಲಾ ರೋಗಿಗಳು, ಸರ್ಕಾರಿ ನೌಕರರು ತುಮಕೂರಿನ ವಾಸನ್ ಐ ಕೇರ್ ಉತ್ತಮ ಗುಣಮಟ್ಟದ ನೇತ್ರ ಆರೈಕೆಯನ್ನು ಪಡೆಯಬಹುದು ಎಂದು ತಿಳಿಸಿದರು.

 

 

ಇದೇ ಸಂದರ್ಭದಲ್ಲಿ ತುಮಕೂರಿನ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ವಾಸನ್ ಐ ಕೇರ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಭಾನು ಪ್ರತಾಪ್, ಸುಂದರ ಮುರುಗೇಶನ್, ಮಾರ್ಕೆಟಿಂಗ್ ವ್ಯವಸ್ಥಾಪಕರಾದ ನಾಗೇಂದ್ರ ಹಾಗೂ ವಾಸನ್ ಐ ಕೇರ್ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *