ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಹೊಸಕೆರೆ ವಲಯದ ಪಿನ್ನೇನಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಪ್ರಸಾದ ರೂಪದಲ್ಲಿ ಪೂಜ್ಯರು ಮಂಜೂರು ಮಾಡಿದ 50000/- ಸಾವಿರ DD ಮೊತ್ತವನ್ನು, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಗುಬ್ಬಿ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳು ದೇವಸ್ಥಾನದ ಕಮಿಟಿಯವರಿಗೆ ಹಸ್ತಾಂತರ ಮಾಡಿದರು.
ಈ ಸಮಯದಲ್ಲಿ ಮಾನ್ಯ ಯೋಜನಾಧಿಕಾರಿ ರಾಜೇಶ್ ,ದೇವಸ್ಥಾನದ ಕಮಿಟಿ ಅಧ್ಯಕ್ಷರಾದ ಮಲ್ಲಯ್ಯ ,ಕಮಿಟಿ ಕಾರ್ಯದರ್ಶಿ ರಾಜ್ ಕುಮಾರ್, ಕಮಿಟಿ ಸದಸ್ಯರು, ಒಕ್ಕೂಟ ಅಧ್ಯಕ್ಷರು ದಯಾನಂದ ,ವಲಯದ ಮೇಲ್ವಿಚಾರಕ ಆನಂದ ಕುಮಾರ್, ಸೇವಾಪ್ರತಿನಿಧಿ ಗಾಯಿತ್ರಿ, ಸಂಘದ ಸದಸ್ಯರು ಹಾಗೂ ಊರಿನ ಮುಖಂಡರು ಉಪಸ್ಥಿತಿ ಇದ್ದರು.