ಸಿದ್ದಾರ್ಥ ವೈದ್ಯಕೀಯ –ಇಂಜಿನಿಯರಿಂಗ್ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳ ಅಧ್ಯಯನ-ವಿಚಾರ ವಿನಿಮಯ
ತುಮಕೂರು: ಉನ್ನತ ಶಿಕ್ಷಣದ ಅಧ್ಯಯನ ಮತ್ತು ಸಾಂಸ್ಕøತಿಕ ವಿಷಯಗಳ ವಿನಿಮಯ ಮಾಡಿಕೊಳ್ಳಲು ನಗರದ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಸಾಹೇ) ವಿಶ್ವವಿದ್ಯಾಲಯಕ್ಕೆ ಇಂದು (ಸೋಮವಾರ) ಭೇಟಿ ನೀಡಿದ ಉತ್ತರ ಅಮೇರಿಕಾದ ಕೆರಿಬಿಯನ್ ದ್ವೀಪರಾಷ್ಟ್ರ ಕುರಾಕೋವದ ‘ಅವಲಾನ್ ವಿಶ್ವವಿದ್ಯಾಲಯದ ನಿಯೋಗ’ವೂ ಸಿದ್ದಾರ್ಥ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳಿಗೆ ಭೇಟಿ ನೀಡಿ, ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡಿತು.
ನಗರದ ಅಗಳಕೋಟೆಯಲ್ಲಿರುವ ಸಾಹೇ ವಿಶ್ವವಿದ್ಯಾಲಯದ ಮುಂಭಾಗದಲ್ಲಿ ಅವಲೋನ್ ವಿಶ್ವವಿದ್ಯಾನಿಲಯದ ಅಧ್ಯಕ್ಷ ಡಾ. ಸಮೀರ್ ಫತ್ತೇ ನೇತೃತ್ವದಲ್ಲಿ 9 ಮಂದಿ ನಿಯೋಗವನ್ನು ಸಾಹೇ ಕುಲಾಧಿಪತಿಗಳಾದ ಸವ್ಯಸಾಚಿ ಡಾ.ಜಿ.ಪರಮೇಶ್ವರ ಅವರು ಸಾಂಪ್ರಾದಾಯಿಕ ಗೌರವ ನೀಡಿ ಬರಮಾಡಿಕೊಂಡರು.
ಡಾ. ಶೋಕತ್ ಫತ್ತೇ(ಕುಲಪತಿ), ಡಾ. ಸಮೀರ್ ಫತ್ಹೆ(ಅಧ್ಯಕ್ಷರು), ಅಲನ್ ಕಾಪ್(ಉಪಾಧ್ಯಕ್ಷರು), ದಿಲು ದಿನಾನಿ( ಉಪಾಧ್ಯಕ್ಷರು), ಡಾ. ಲ್ಯಾನ್ನಿ ವಿಲ್ಸನ್(ಮುಖ್ಯಸ್ಥರು, ವೈದ್ಯಕೀಯ ವಿಜ್ಞಾನ ವಿಭಾಗ- ಕ್ಲಿನಿಕಲ್ ಸೈನ್ಸಸ್ ಡೀನ್), ಡಾ. ಸತೀಶ್ ಅರ್ಜ( ಮುಖ್ಯಸ್ಥರು, ಔಷಧೀಯ ವಿದ್ಯಾಲಯ-ಸ್ಕೂಲ್ ಆಫ್ ಮೆಡಿಸನ್ ಡೀನ್) ಅವರನ್ನು ಒಳಗೊಂಡ 9 ಮಂದಿ ನಿಯೋಗದ ಸದಸ್ಯರ ವಿದೇಶಿ ತಂಡ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ತುರ್ತು ಚಿಕಿತ್ಸಾ ವಿಭಾಗ,ರೇಡಿಯಾಜಿ,ಡಯಾಗ್ನಸ್ಟಿಕ್ ಲ್ಯಾಬ್, ಸೂಪರ್ ಸೆಷಾಲಿಟಿ ವಿಭಾಗ, ಚರ್ಮರೋಗ ಮತ್ತು ಹೃದಯ ರೋಗ ವಿಭಾಗಗಳಿಗೆ ತರೆಳಿ ವೈದ್ಯರೊಂದಿಗೆ ಆದುನಿಕ ತಂತ್ರಜ್ಞಾನದ ಅಳವಡಿಕೆ ಮತ್ತು ಬಳಕೆ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡರು.
ಆಸ್ಪತ್ರೆಯ ತುರ್ತುನಿಗಾ ಘಟಕದ ವ್ಯವಸ್ಥೆಗಳನ್ನು ಪರೀಶೀಲಿಸಿದ ತಂಡ, ವಿದ್ಯಾರ್ಥಿಗಳ ವಿಶೇಷ ತರಗತಿಗಳಿಗಾಗಿ ನಿರ್ಮಿಸಲಾದ ಸ್ಕಿಲ್ ಲ್ಯಾಬ್, ಡೆಂಟಲ್ ಕಾಲೇಜಿನ ಆಧುನಿಕ ತಂತ್ರಜ್ಞಾನದ ಸ್ಮೈಲ್ ವಿಭಾಗ, ಸೆಮಿನಾರ್ ಸಭಾಂಗಣ, ಬಹುಮಹಡಿಗಳ ನೌಕರರ ವಸತಿ ಸಮುಚ್ಚಯಗಳ ಮೂಲಸೌಕರ್ಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿತು.
ನಂತರ ಶ್ರೀ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿಗೆ ಬೇಟಿ ನೀಡಿದ ವಿದೇಶಿ ನಿಯೋಗ, ಗೋಳಾಕೃತಿಯ ಗ್ರಂಥಾಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು. ಇಂಜಿನಿಯರಿಂಗ್ ಶಿಕ್ಷಣದ ಬಗ್ಗೆ ಮಾಹಿತಿ ಗ್ರಹಿಸಿತು. ಇದೇ ವೇಳೆ ವಿದೇಶಿ ನಿಯೋಗದ ಸದಸ್ಯರನ್ನು ಸಂಸ್ಥೆ ಸನ್ಮಾನಿಸಿ ಗೌರವಿಸಿತು.
ಪರಸ್ಪರ ಮಾತುಕತೆ :
ಸಾಹೇ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕುಲಾಧಿಪತಿ ಸವ್ಯಸಾಚಿ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಸಾಹೇ ವಿವಿ ಆಡಳಿತ, ಶೈಕ್ಷಣಿಕ ಮತ್ತು ಪರೀಕ್ಷಾಮಂಡಳಿ ಸದಸ್ಯರೊಂದಿಗೆ ಡಾ. ಸಮೀರ್ ಫತ್ತೇ ನೇತೃತ್ವದ ವಿದೇಶಿ ನಿಯೋಗವು ಜಂಟಿ ಸಂಶೋಧನಾ ಚಟುವಟಿಕೆಗಳು, ಅಧ್ಯಾಪಕರ ಅಭಿವೃದ್ಧಿ ಮತ್ತು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು ಕುರಿತು ಸುದೀರ್ಘ ಚರ್ಚೆ ನಡೆಸಿತು.
ಸಾಹೇ ಅಳವಡಿಸಿಕೊಂಡಿರುವ ವಿವಿಧ ಶೈಕ್ಷಣಿಕ ಮತ್ತು ಸಾಂಸ್ಕøತಿಕ ವಿಷಯಗಳ ಅಧ್ಯಯನ ಮತ್ತು ಅಳವಡಿಕೆ ಕುರಿತು ಚರ್ಚಿಸಿತು.
ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಯನ್ನು ಮುನ್ನಡೆಸಲು ಬೇಕಾದ ಅನುಭವ ಮತ್ತು ತಜ್ಞತೆಯನ್ನು ಪಡೆದುಕೊಳ್ಳಲು ತಂಡ ಬಯಸಿ, ಈ ಭೇಟಿಗೆ ಮುಂದಾಗಿದೆ ಎಂದು ಅವಲಾನ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಮೀರ್ ಫತ್ತೇ ಅವರು, ಸ್ಥಳೀಯವಾಗಿ ಮತ್ತು ಪ್ರಪಂಚದಾದ್ಯಂತ ಸಮುದಾಯಗಳಿಗೆ ಸೇವೆ ಸಲ್ಲಿಸುವ ಸಮರ್ಥ ವೈದ್ಯರನ್ನು ಸಿದ್ಧಪಡಿಸುವುದು ಅವಲಾನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‍ನ ಉದ್ದೇಶವಾಗಿದೆ ಎಂದರು.
ವೈದ್ಯಕೀಯ ಅಭ್ಯಾಸಕ್ಕೆ ಅಗತ್ಯವಾದ ವೃತ್ತಿಪರತೆ ಮತ್ತು ನೈತಿಕ ನಡವಳಿಕೆಯ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿರುವ ಸಂಸ್ಥೆ 4 ದಶಕಗಳ ಸುದೀರ್ಘ ಇತಿಹಾಸ ಹೊಂದಿದೆ. ಮುಂದೆ ಅವಲಾನ್ ವಿಶ್ವವಿದ್ಯಾಲಯದ ಪದವೀಧರರು, ರೋಗಿಗಳ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಬದ್ಧರಾಗಿರುವುದಾಗಿ ಡಾ.ಜಿ.ಪರಮೇಶ್ವರ ಅವರು ಸಭೆಯಲ್ಲಿ ತಿಳಿಸಿದರು.
ಅಂತರಾಷ್ಟ್ರೀಯ ಸಹಯೋಗಗಳನ್ನು ಬೆಳೆಸುವುದು ಮತ್ತು ಅಧ್ಯಾಪಕರಿಗೆ ಶೈಕ್ಷಣಿಕ ಅನುಭವಗಳನ್ನು ಉತ್ಕøಷ್ಟಗೊಳಿಸುವುದು ಮತ್ತು ವಿದ್ಯಾರ್ಥಿಗಳು ವಿಶ್ವಮಟ್ಟಕ್ಕೆ ಸಮನಾಗಿ ಅಧ್ಯಯನಶೀಲರನ್ನಾಗಿಸುವ ಗುರಿಯನ್ನು ತಲುಪುವುದು ಈ ಭೇಟಿಯ ಮಹತ್ವವಾಗಿದೆ. ಹೊಸತನವನ್ನು ಅಳವಡಿಸಿಕೊಳ್ಳಲು-ವಿನಿಮಯ ಮಾಡಿಕೊಳ್ಳಲು ಜಂಟಿ ಮಾತುಕತೆ ಫಲಕಾರಿಯಾಗಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಜಿ.ಪರಮೇಶ್ವರ ಅವರು ಅಭಿಪ್ರಾಯಪಟ್ಟರು.
ಗುಣಾತ್ಮಕ ಚರ್ಚೆಗಳು ಮತ್ತು ಆಲೋಚನೆಗಳ ವಿನಿಮಯ. ವೈವಿಧ್ಯಮಯ ಶಿಕ್ಷಣದ ಬಗ್ಗೆ ಆಳವಾದ ತಿಳುವಳಿಕೆ, ಶೈಕ್ಷಣಿಕ-ಸಾಂಸ್ಕøತಿಕ ಸಾಮಥ್ರ್ಯಗಳನ್ನು ಇನ್ನಷ್ಟು ಬಲಪಡಿಸುವುದು ಮತ್ತು ಪರಸ್ಪರ ವಿಚಾರಗಳು-ಚಿಂತನೆಗಳನ್ನು ಬಲಪಡಿಸುವುದ ಇಮದಿನ ಅಗತ್ಯವಾಗಿದೆ ಎಂದು ಕುಲಾಧಿಪತಿ ಡಾ.ಜಿ.ಪರಮೇಶ್ವರ ಅವರು ಸಭೆಗೆ ತಿಳಿಸಿದರು
ವಿದ್ಯಾರ್ಥಿಗಳಿಗೆ ಅತ್ಯುನ್ನತ ಮಟ್ಟದ ಶಿಕ್ಷಣವನ್ನು ಮತ್ತು ಪ್ರಾಯೋಗಿಕ ಅಭ್ಯಾಸಗಳಲ್ಲಿ ಉನ್ನತ ಮಟ್ಟದ ಗುಣಮಟ್ಟವನ್ನು ಒದಗಿಸುವ ಬದ್ಧತೆಯನ್ನು ಕಾಪಾಡಿಕೊಂಡು ಬರಲು ಸಾಹೇ ವಿಶ್ವವಿದ್ಯಾಲಯ ಅವಲಾನ್ ವಿವಿ ಪ್ರದರ್ಶಿಸುತ್ತದೆ. ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಕಠಿಣ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಅವೆಲಾನ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಜ್ಞಾನ ವಿಭಾಗದ ಡೀನ್ ಡಾ. ಲ್ಯಾನ್ನಿ ವಿಲ್ಸನ್ ಅವರು ಸಭೆಗೆ ತಿಳಿಸಿದರು.
ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಕನ್ನಿಕಾ ಪರಮೇಶ್ವರಿ, ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ರಿಜಿಸ್ಟ್ರಾರ್ ಡಾ. ಎಂ.ಜೆಡ್.ಕುರಿಯನ್, ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಾಣಿಕೊಪ್ಪ, ಉಪ ಪ್ರಾಂಶುಪಾಲರಾದ ಡಾ. ಪ್ರಭಾಕರ್, ಡೆಂಟಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್ ಕುಡುವಾ, ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್ ಸೇರಿದಂತೆ ವಿವಿದ ವಿಭಾಗಗಳ ಪ್ರಾಧ್ಯಾಪಕರು ಜಂಟಿ ಸಭೆಯಲ್ಲಿ ಪಾಲ್ಗೊಂಡಿದ್ದರು.