ಹೇಮಾವತಿ ನಾಲಾ ವಲಯ ಗೊರೂರು ಜಲಾಶಯದಿಂದ ತುಮಕೂರಿಗೆ ಹಂಚಿಕೆಯಾದ ನೀರಿನಲ್ಲೇ , ಮಾಗಡಿ ಹಾಗೂ ರಾಮನಗರಕ್ಕೆ ಶ್ರೀರಂಗ ಯೋಜನೆ ಅಡಿ , ನೀರು ಸೆಳೆಯುವ ಹೇಮಾವತಿ ಎಕ್ಸ್‌ಪ್ರೆಸ್ ಚ್ಯಾಲನ್ ವಿರೋಧಿಸಿ , ನಡೆಯುತ್ತಿರುವ ಹೋರಾಟದ ಮುಂದಿನ ಹೆಜ್ಜೆಯ ಬಗ್ಗೆ ತುಮಕೂರು ನಗರದಲ್ಲಿಂದು ಶ್ರೀ ಮುರುಘ ರಾಜೇಂದ್ರ ಸಭಾಂಗಣದಲ್ಲಿ ಹೋರಾಟದ ನೇತೃತ್ವ ವಹಿಸಿರುವ ಮಾಜಿ ಸಚಿವ ಸೊಗಡು ಶಿವಣ್ಣನವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಹೇಮಾವತಿ ನೀರಿನ ತುಮಕೂರು ಜಿಲ್ಲೆಯ ಹಕ್ಕಿಗೆ ಬಗ್ಗೆ ಇದೇ ಮೇ 30 ರ ಬೆಳಗ್ಗೆ 10 ಘಂಟೆಗೆ ಜಿಲ್ಲೆಯ ಜನಪ್ರತಿನಿಧಿಗಳು, ನಾಗರೀಕರು ಮತ್ತು ರೈತರನ್ನು ಒಳಗೊಂಡು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಪರಮೇಶ್ವರ್ ರವರ ಹೆಗ್ಗರೆ ನಿವಾಸದ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಸಿ , ಮನವಿ ಪತ್ರ ನೀಡುವ ಬಗ್ಗೆ ತೀರ್ಮಾನಿಸ ಲಾಯಿತು.
ಈ ಸಂಧರ್ಭದಲ್ಲಿ ಮಾಜಿ ಸಚಿವ ಡಿ.ನಾಗರಾಜಯ್ಯ, ಶಾಸಕರಾದ ಎಂ.ಟಿ.ಕೃಷ್ಣಪ್ಪ ಮತ್ತು ಬಿ.ಸುರೇಶ್ ಗೌಡ, ಮಾಜಿ ಶಾಸಕ ಹೆಚ್.ನಿಂಗಪ್ಪ, ಪ್ರಮುಖರಾದ ಎಸ್.ಡಿ.ದಿಲೀಪ್ ಕುಮಾರ್, ಬಿ.ಎಸ್.ನಾಗರಾಜು,ಪಿ.ಹೆಚ್.ಅನಿಲ್ ಕುಮಾರ್, ಪಂಚಾಕ್ಷರಯ್ಯ, ಸೊಗಡು ಕುಮಾರಸ್ವಾಮಿ, ಎಂ.ಪಿ.ಪ್ರಸನ್ನಕುಮಾರ್, ಪುರವರಮೂರ್ತಿ, ಬಸವಕುಮಾರ್, ಆಟೋನವೀನ್, ತಿಪಟೂರು ನಗರಸಭೆ ಸದಸ್ಯೆಯರಾದ ಸಂಧ್ಯಾಕಿರಣ್ ಮತ್ತು ಕೋಯಿಲಾಗಂಗಾಧರ್, ರೈತ ಸಂಘದ ಜಿಲ್ಲಾಧ್ಯಕ್ಷ ಆರಾಧ್ಯ, ಶಿರಾ ಅಧ್ಯಕ್ಷ ದ್ಯಾಮೇಗೌಡ, ತುರುವೇಕೆರೆಯ ನಾಗೇಂದ್ರ, ಗಂಗಾಧರಯ್ಯ, ಕೆ.ಬಿ.ಉಮೇಶ್ ಮುಂತಾದವರು ಉಪಸ್ಥಿತರಿದ್ದರು.