ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು ಕೂಡಲೇ ಬಂಧಿಸುವಂತೆ ಒತ್ತಾಯ.

 

 

ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು ಕೂಡಲೇ
ಬಂಧಿಸುವಂತೆ ಒತ್ತಾಯ.

ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ
ಸಮಿತಿಯ ಸ್ಲಂ ಮಹಿಳಾ ಘಟಕದಿಂದ ಬೆಳಗುಂಬ ರಸ್ತೆಯ ಸ್ಲಂ
ಭವನದಲ್ಲಿ ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ
ಕೂಡಲೇ ಪ್ರಜ್ವಲ್ ರೆವಣ್ಣನನ್ನು ಬಂಧಿಸುವಂತೆ ಹೋತ್ತಯಿಸಿದರು.

ದೌರ್ಜನ್ಯಕ್ಕೆ ಒಳಗಾದ ಹಾಗೂ
ಸಾವಿರಾರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯನಡೆಸಿರುವ
ಆರೋಪದ ಹಿನ್ನಲೆಯಲ್ಲಿ ಮಹಿಳಾ ಆಯೋಗದ ಶಿಫಾರಸಿನ ಮೇಲೆ ರಾಜ್ಯ
ಸರ್ಕಾರ ಕ್ರಮವಹಿಸಿರುವುದನ್ನು ಸಂಘಟನೆ ಸ್ವಾಗತಿಸುತ್ತದೆ.

ಆದರೆ ಆರೋಪಿಗೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಮುಖ
ರಾಜಕಾರಣಿಗಳ ಬೆಂಬಲವಿರುವುದರಿಂದ ಈಗಾಗಲೇ ವಿದೇಶಕ್ಕೆ
ಪಲಾಯನಗೊಂಡಿದ್ದು ಈತನ್ನು ರಾಜ್ಯ ಸರ್ಕಾರ ಪ್ರಕರಣದ ಸತ್ಯ ಸತ್ಯತೆಗಳನ್ನು ಪತ್ತೇಹಚ್ಚುವ ಸಲುವಾಗಿ ರಚಿಸಿರುವ ಎಸ್, ಐ,ಟಿ, ತಂಡ ತಕ್ಷಣವೇ ಈತನನ್ನು ಬಂಧಿಸಿ ನೊಂದ ಮಹಿಳೆಯರಿಗೆ
ನ್ಯಾಯ ಒದಗಿಸಿಕೊಡಬೇಕೆಂದು ಸ್ಲಂ ಮಹಿಳಾ ಸಮಿತಿ ಆಗ್ರಹಿಸುತ್ತದೆ.

 

 

ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದ ಮಹಿಳಾ ಘಟಕದ ಸಂಚಾಲಕರಾದ ಅನುಪಮರವರು
ಪ್ರಜ್ವಲ್ ರೆವಣ್ಣನ ಕರ್ಮಕಾಂಡ ಮೊದಲೇ ಗೊತ್ತಿದ್ದರು ಹಾಸನದಿಂದ
ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಿದ ಬಿಜೆಪಿ ಮತ್ತು ಜೆಡಿಎಸ್
ಪಕ್ಷಗಳು ಹೆಣ್ಣು ಮಕ್ಕಳಿಗೆ ದ್ರೋಹ ಬಗೆದಿವೆ, ತಾಳಿ ಬಗ್ಗೆ
ಮಾತನಾಡುವ ಪ್ರಧಾನಿಗಳು ಈ ಪ್ರಕರಣದ ಬಗ್ಗೆ ಮೌನವಹಿಸಿರುವುದು
ಏಕೆ ? ಮಂಗಳಸೂತ್ರ ಬರೀ ಮಾತಿಗಾಗಿ ಅಥವಾ ರಾಜಕಾರಣಕ್ಕೆ
ಬಳಸಿಕೊಳ್ಳುವುದು ಎಷ್ಟು ಸರಿ. ರಾಜಕಾರಣಿಗಳಿಗೆ ಒಂದು ನ್ಯಾಯ
ಜನಸಾಮಾನ್ಯರಿಗೆ ಒಂದು ನ್ಯಾಯನಾ ? ತಕ್ಷಣ ಚುನಾವಣಾ ಆಯೋಗ ಈ ಪ್ರಕರಣದ ಬಗ್ಗೆ
ಮಧ್ಯೆ ಪ್ರವೇಶ ಮಾಡಬೇಕೆಂದರು.

ಪ್ರತಿಭಟನೆಯಲ್ಲಿ ಸ್ಲಂ
ಸಮಿತಿಯ ಕಾರ್ಯದರ್ಶಿ ಅರುಣ್, ತಿರುಮಲಯ್ಯ ಪದಾಧಿಕಾರಿಗಳಾದ
ಮಂಗಳಮ್ಮ, ಪೂರ್ಣಿಮಾ, ಸಂದ್ಯಾ ಯಾದವ್, ಹನುಮಕ್ಕ, ಶಾರದಮ್ಮ,
ಗಂಗಾ, ಸುಧಾ, ಪಾರ್ವತಮ್ಮ, ವಸಂತಮ್ಮ, ದೇವಿಕಾ. ಶಾಂತಮ್ಮ
ಮುಂತಾದವರು ಪಾಲ್ಗೊಂಡಿದದ್ದರು.

Leave a Reply

Your email address will not be published. Required fields are marked *