
ಗುಬ್ಬಿ ಎನ್ ರಾಂಪುರ ::ಹನುಮಜಯಂತಿ ಗುಬ್ಬಿ ತಾ/ ದಿ- 02.೦4.2026 ಶನಿವಾರ ಹನುಮ ಜಯಂತಿಯ ಪ್ರಯುಕ್ತ ನಿಟ್ಟೂರು ಹೋಬಳಿ ಎನ್ ರಾಂಪುರ ಗ್ರಾಮದಲ್ಲಿ ನಾಡಿನ.ಒಳಿತಿಗಾಗಿ ಅಂದು ಬ್ರಾಹ್ಮಿ ಮುಹೂರ್ತ ದಲ್ಲಿ ಹಸಿರು ತೋಪಿನ ನಡುವೆ ವಿರಾಜಮಾನರಾದ ಪುರಾತನ ಪ್ರಸಿದ್ಧ ಶ್ರೀ ವೀರಾಂಜನೇಯ ಸ್ವಾಮಿಯವರ ಭವ್ಯಮೂರ್ತಿಗೆ ಪಂಚಾಮೃತ ಅಭಿಷೇಕ ಮತ್ತು ಲೋಕದ ಒಳಿತಿಗಾಗಿ ಹೋಮ ಹವನ ಕಾರ್ಯಗಳು ಸಾಗುತ್ತವೆ. ಅದೇ ದಿನ ಗ್ರಾಮದ ಕ್ಷೇತ್ರ ಪಾಲಕ ಬಸವೇಶ್ವರ ಸ್ವಾಮಿ,, ತಿಮ್ಮಪ್ಪ,, ಆಂಜನೇಯ ಪರಿವಾರ ದೇವರುಗಳ ಆಗಮನ ವಿಶೇಷ ಪೂಜಾ ಕೈಂಕರ್ಯಗಳ ಸಹಿತ ಸಾಮೂಹಿಕ ಅನ್ನಸಂಪರ್ಪಣೆ ಕಾರ್ಯಕ್ರಮಗಳು ಜರುಗುತ್ತವೆ.ಇದೇ ದಿನ ಸಂಜೆ ಗ್ರಾಮದಲ್ಲಿ ಆಗಮಿಕ ದೇವರುಗಳ ಅದ್ದೂರಿ ರಾಜಬೀದಿ ಮೆರವಣಿಗೆ ನಂತರ ಗುಡಿದುಂಬುವ ಕಾರ್ಯಕ್ರಮವಿರುತ್ತದೆ.ಗ್ರಾಮದ ಊರಿನ ಸ್ವಯಂ ಪ್ರೇರಿತ ಸೇವಾ ಮನೋಭಾವದ ಯುವಕರಗಳು ಅಂದು ಸ್ವಾಮಿಯರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆಸ್ತಿಕ ಭಕ್ತಮಹಾಶಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸ್ವಾಮಿಯವರ ಕೃಪಾಕಟಾಕ್ಷಕ್ಕೆ ಒಳಗಾಗಬೇಕಾಗಿ ವಿನಂತಿ ನಾಡಿನ ಒಳಿತಿಗಾಗಿ ಗ್ರಾಮದ ಪ್ರಮುಖರು ಮುಖಂಡರುಗಳು ಹಾಲಿ ಮಾಜಿ ಗ್ರಾಮ ಪಂಚಾಯತಿ ಸದಸ್ಯರುಗಳು ಊರಿನ ಗ್ರಾಮಸ್ಥರು ಆಜು ಬಾಜು ಊರಿನವರು ಈ ಸೇವಾ ಕಾರ್ಯದಲ್ಲಿ ಸಮಸ್ತ ಭಕ್ತಾದಿಗಳನ್ನು ಆದರದಿಂದ ಸ್ವಾಗತ ಕೋರಿರುತ್ತಾರೆ. ಸರ್ವೇಜನಸುಖಿನೋಭವಂತು.
ವರದಿ: ಪ್ರವೀಣ್ ಎಂ ಟಿ ಮದನಘಟ್ಟ