ಅಧ್ಯಕ್ಷರಾಗಿ ಹೆಚ್.ಎಸ್.ಪರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ರಘು.ಎ.ಎನ್. ಆಯ್ಕೆ
ತುಮಕೂರು: ರಾಜ್ಯ ಮಟ್ಟದಲ್ಲಿ ಮಾತ್ರ ಇದ್ದ ಸಂಘವು ಪ್ರಥಮ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಘಟಕವನ್ನು ರಚಿಸಿದ್ದು, ತುಮಕೂರು ಜಿಲ್ಲಾ ಘಟಕವು ರಾಜ್ಯ ಸಂಘದ ಅಂಗ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ ಎಂದುರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಕೆರೆಗೋಡು ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಎಸ್ಸಿ-ಎಸ್ಟಿ ಪತ್ರಿಕಾ ಸಂಪಾದಕರು ಹತ್ತಕ್ಕೂ ಹೆಚ್ಚು ಇರುವ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಘಟಕಗಳನ್ನು ರಚಿಸಲಾಗುವುದು ಎಂದು ಸಂಘದ ಪದಾಧಿಕಾರಿಗಳು ಅವರು ತಿಳಿಸಿದರು.
ರಾಜ್ಯದಲ್ಲಿರುವ ಎಸ್ಸಿ-ಎಸ್ಟಿ ಸಂಪಾದಕರುಗಳು ಪತ್ರಿಕೆಯ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಸಂಘದ ವತಿಯಿಂದ ಸಂಪಾದಕರಗಳಿಗೆ ಸಂಘದ ವತಿಯಿಂದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುವುದು, ಪತ್ರಿಕಾರಂಗದಲ್ಲಿ ಹೊಸ ಆವಿಷ್ಕಾರ ಮತ್ತು ತಂತ್ರಜ್ಞಾನ ಅಳವಡಿಸಿಕೊಳ್ಳುವ ಕುರಿತು ತರಬೇತಿ ನೀಡಲಾಗುವುದು ಎಂದು ಹೇಳಿದರು.
ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಟೆಲೆಕ್ಸ್ ರವಿಕುಮಾರ್ ಮಾತನಾಡಿ ಪತ್ರಿಕಾರಂಗದಲ್ಲಿ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಶೋಷಿತ ಸಮುದಾಯಗಳ ಧ್ವನಿಯನ್ನು ಬಲಪಡಿಸುವ ಉದ್ದೇಶದಿಂದ ದಲಿತ ಮತ್ತು ಶೂದ್ರ ಸಮುದಾಯಗಳ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮಾಧ್ಯಮ ಕ್ಷೇತ್ರವನ್ನು ಪ್ರವೇಶಿಸಬೇಕಾಗಿದೆ ಕೇವಲ ಜಾತಿಯ ಆಧಾರದ ಮೇಲೆ ಪತ್ರಕರ್ತರಾಗಲು ಸಾಧ್ಯವಿಲ್ಲ; ಜ್ಞಾನ, ವೃತ್ತಿ ಕೌಶಲ್ಯ ಮತ್ತು ಸಮರ್ಪಣಾ ಭಾವದೊಂದಿಗೆ ಕೆಲಸ ಮಾಡಿದಾಗ ಮಾತ್ರ ಉತ್ತಮ ಪತ್ರಕರ್ತರಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಇದೇ ವೇಳೆ, ಸಂಘಟನೆಯು ಅಂಬೇಡ್ಕರ್, ಬಸವಲಿಂಗಪ್ಪ ಹಾಗೂ ಪ್ರೊ. ಬಿ. ಕೃಷ್ಣಪ್ಪ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿಗಳ ಮೂಲಕ ದಲಿತ ಸಂವೇದನೆಯಿಂದ ಕಾರ್ಯನಿರ್ವಹಿಸುವ ಎಲ್ಲಾ ಸಮುದಾಯದ ಪತ್ರಕರ್ತರನ್ನು ಗೌರವಿಸುತ್ತಿದೆ ಎಂದರು.
ಸಣ್ಣ ಮತ್ತು ಪ್ರಾದೇಶಿಕ ಪತ್ರಿಕೆಗಳ ಬೆಳವಣಿಗೆಗೆ ಸರ್ಕಾರ ಬೆಂಬಲ ನೀಡಬೇಕು ಪತ್ರಿಕೆಗಳಿಗೆ ಜಾಹೀರಾತು ಹಂಚಿಕೆ ಮಾಡುವಾಗ ಸಾಮಾಜಿಕ ನ್ಯಾಯವನ್ನು ಪಾಲಿಸಬೇಕು. ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ವೃತ್ತಿ ಕೌಶಲ್ಯ ಸುಧಾರಣೆಗೆ ಪತ್ರಕರ್ತರಿಗೆ ವಿಶೇಷ ತರಬೇತಿ ಹಾಗೂ ಕಾರ್ಯಾಗಾರಗಳನ್ನು ಆಯೋಜಿ ಸಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ರಾಜ್ಯ ಅಧ್ಯಕ್ಷ ಚೆಲುವರಾಜ್ ಮಾತನಾಡಿ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳು ತಮ್ಮ ಹಕ್ಕುಗಳಿಗಾಗಿ ಹಾಗೂ ಪತ್ರಿಕಾರಂಗದ ಏಳಿಗೆಗಾಗಿ ಒಗ್ಗೂಡಿ ಹೋರಾಡುವುದು ಅತ್ಯಗತ್ಯವಾಗಿ ಎಂದು ಅಭಿಪ್ರಾಯಪಟ್ಟರು.
ಕಳೆದ 26 ವರ್ಷಗಳಿಂದ ಸಂಘಟನೆಯು ಸಂಪಾದಕರ ಏಳಿಗೆಗೆ ಹಾಗೂ ಸೌಲಭ್ಯಗಳಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. 2001ರಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಹಾಕಿ ಕೊಟ್ಟ ಬಲವಾದ ಬುನಾದಿಯ ಮೇಲೆ ಸಂಘಟನೆ ಹಂತ ಹಂತವಾಗಿ ಬೆಳೆದು ಬಂದಿದೆ, ಸಮಾಜಮುಖಿ ಸೇವೆ ಮಾಡಿದವರನ್ನು ಗುರುತಿಸಲು ಈಗಾಗಲೇ ದತ್ತಿನಿಧಿಗಳನ್ನು ಸ್ಥಾಪಿಸಲಾಗಿದೆ, ಸಂಘಟನೆಯು ಎಲ್ಲರನ್ನು ಒಳಗೊಂಡು ಸೌಹಾರ್ದತೆ ಯಿಂದ ಕಾರ್ಯನಿರ್ವಹಿಸುತ್ತಿದ್ದು, ಪತ್ರಿಕಾ ರಂಗದ ಸದಸ್ಯರ ಹಿತಕಾಯಲು ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಯೋಗೀಶ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಚಿ.ನಿ. ಪುರುಷೋತ್ತಮ್, ಟಿ.ಇ.ರಘುರಾಮ್, ಹರೀಶ್ ಆಚಾರ್ಯ, ಜಗನ್ನಾಥ್ ಕಾಳೇನಹಳ್ಳಿ, ಜಯಣ್ಣ ಬೆಳೆಗೆರೆ, ಸುರೇಶ್ ಶ್ರೀವತ್ಸ ಅವರು ಮಾತನಾಡಿ, ನೂತನ ಸಂಘಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರಾಮಚಂದ್ರಯ್ಯ, ಹಾಲ್ಕುರಿಕೆ ಮಂಜುನಾಥ್, ಡಿ.ಕುಮಾರ್, ದೇವರಾಜು, ಗೋವಿಂದರಾಜು, ಭಾನುಪ್ರಕಾಶ್, ಮಾರುತಿ ಪ್ರಸಾದ್, ಮಧು ಇಂಗದಾಳ್, ದೊಡ್ಡೇರಿ ಕಣಿಮಯ್ಯ, ಯೋಗೀಶ್ ಮೆಳೇಕಲ್ಲಹಳ್ಳಿ, ಮೈತ್ರಿ ವೆಂಕಟಾಚಲ, ಸಿದ್ದೇಶ್, ವಿನಿ, ಪೀರ್, ಶಿವಕುಮಾರ್, ಸುರೇಶ್, ದಲಿತ ಮುಖಂಡ ರಂಜನ್ ಸೇರಿದಂತೆ ಇತರರಿದ್ದರು.
ನೂತನ ಪದಾಧಿಕಾರಿಗಳು
ಗೌರವಾಧ್ಯಕ್ಷರಾಗಿ ಗಂಗಹನುಮಯ್ಯ, ಗೌರವ ಉಪಾಧ್ಯಕ್ಷರಾಗಿ ಜಯನುಡಿ ಜಯಣ್ಣ, ಪೋಷಕರಾಗಿ ಸೊಗಡು ವೆಂಕಟೇಶ್, ಮಾರುತಿ ಗಂಗಹನುಮಯ್ಯ, ಅಧ್ಯಕ್ಷರಾಗಿ ಪರಮೇಶ್ ಎಚ್.ಎಸ್., ಉಪಾಧ್ಯಕ್ಷರಾಗಿ ಕಂಬಣ್ಣ, ಪ್ರಧಾನ ಕಾರ್ಯದರ್ಶಿ ರಘು ಎ.ಎನ್, ಕಾರ್ಯದರ್ಶಿ ರವಿಕುಮಾರ್ ಚಿಂಪುಗಾನಹಳ್ಳಿ, ಖಜಾಂಚಿ ಸತೀಶ್ ಹಾರೋಗೆರೆ, ಸಂಘಟನಾ ಸಂಚಾಲಕರಾಗಿ ಸುರೇಶ್ ಅವರು ಆಯ್ಕೆಯಾದರು.